– ಪರಸ್ಪರ ವಿಶ್ ಮಾಡ್ಕೊಂಡ ದಂಪತಿ
– ವಿರಾಟ್‍ಗೆ ಮಿಸ್ ಯೂ ಅಂದ್ರು ಅನುಷ್ಕಾ
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ದಿನದ ಪ್ರಯುಕ್ತ ಒಬ್ಬರಿಗೊಬ್ಬರು ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.
ಹೌದು. 3ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ ದಂಪತಿಗಳಿದ್ದಾರೆ. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಒಬ್ಬರಿಗೊಬ್ಬರು ವಿಶ್ ಮಾಡಿಕೊಂಡಿದ್ದಾರೆ.
View this post on Instagram
ಅನುಷ್ಕಾ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇಬ್ಬರು ಇರುವ ಫೋಟೋ ಶೇರ್ ಮಾಡಿ ಮೂರು ವರ್ಷಗಳ ಪಯಣ, ಶೀಘ್ರದಲ್ಲೇ ಮೂವರಾಗಲಿದ್ದೇವೆ. ಮಿಸ್ ಯೂ ಎಂದು ಬರೆದು ಪತಿ ವಿರಾಟ್‍ಗೆ ಮದುವೆ ವಾರ್ಷಿಕೋತ್ಸವದ ವಿಶ್ ಮಾಡಿದ್ದಾರೆ. ಇತ್ತ ವಿವಾಹ ವಾರ್ಷಿಕೋತ್ಸವದಂದು ಮದುವೆಯಲ್ಲಿ ತೆಗೆದ ಈ ಫೋಟೋ ವನ್ನು ಹಂಚಿಕೊಳ್ಳುವ ಮೂಲಕ ಮೂರು ವರ್ಷಗಳ ಕಾಲ ಜೊತೆ ಇದ್ದೇವೆ ರೆಡ್ ಹಾರ್ಟ್ ಎಂದು ಬರೆದುಕೊಂಡು ಪತ್ನಿಗೆ ಕೂಡ ಕೊಹ್ಲಿ ವಿಶ್ ಮಾಡಿದ್ದಾರೆ.
3 years and onto a lifetime together ❤️ pic.twitter.com/a30gdU87vS
— Virat Kohli (@imVkohli) December 11, 2020
ಅನುಷ್ಕಾ, ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ಗಳಿಗೆ ಅಭಿಮಾನಿಗಳೂ ಶುಭ ಕೋರುತ್ತಿದ್ದಾರೆ. ಅನುಷ್ಕಾ ಅವರ ಕುಟುಂಬಕ್ಕೆ ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ಹೊಸ ಅತಿಥಿಯ ಆಗಮನವಾಗಲಿದೆ.
2017ರ ಡಿ. 11ರಂದು ವಿವಾಹವಾದ ಈ ಜೋಡಿ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅನುಷ್ಕಾಗೆ ಮುಂದಿನ ತಿಂಗಳು ಡೆಲಿವರಿಯಾಗಲಿದೆ. ಇದಕ್ಕಾಗಿ ಕೇವಲ ವಿರಾಟ್ ದಂಪತಿ ಮಾತ್ರವಲ್ಲ, ಅವರ ಕೋಟ್ಯಂತರ ಅಭಿಮಾನಿಗಳೂ ಎದುರು ನೋಡುತ್ತಿದ್ದಾರೆ.