– ಸರಳ ಜೀವನಕ್ಕೆ ಮಾದರಿಯಾದ ದಂಪತಿ
– ಆಧುನಿಕ ಸೌಲಭ್ಯವಿಲ್ಲದೆ ಜೀವನ
ನವದೆಹಲಿ: ಪರಿಸರಪ್ರೇಮಿ ಮಹಿಳೆಯೊಬ್ಬರು ಸರಿಸುಮಾರು 3 ವರ್ಷಗಳಿಂದ ಸರ್ಕಾರದಿಂದ ವಿದ್ಯತ್ ಮತ್ತು ನೀರಿನ ಸೌಲಭ್ಯ ಪಡೆಯದೇ ಮಾದರಿ ಜೀವನವನ್ನು ನಡೆಸುತ್ತಿದ್ದಾರೆ.
ಹೌದು. ಇಂದಿನ ದಿನದಲ್ಲಿ ಕರೆಂಟ್ ಇಲ್ಲದೇ ಜೀವನ ನಡೆಸಲು ಸಾಧ್ಯವಿಲ್ಲ. ಹೀಗಿರುವಾಗ ಜೆಎನ್‍ಯುನ ಮಾಜಿ ಪ್ರೊಫೆಸರ್ ಆಗಿರುವ ಸೌಮ್ಯಾ ಅವರಿಗೆ ಕಳೆದ ಮೂರು ವರ್ಷಗಳಿಂದ ಕರೆಂಟ್ ಮತ್ತು ನೀರಿನ ಬಿಲ್ ಕಟ್ಟುವ ಸಂದರ್ಭವೇ ಬಂದಿಲ್ಲವಂತೆ.
Advertisement
ಸೌಮ್ಯಾ ಅವರು ಡೆಹ್ರಾಡೂನ್‍ನಲ್ಲಿ ವಾಸವಾಗಿದ್ದಾರೆ. ಎಲ್ಲರಂತೆ ಸರಳವಾಗಿ ತುಂಬಾ ಚೆಂದದ ಜೀವನವನ್ನು ಕಟ್ಟಿಕೊಂಡಿದ್ದಾರೆ. ಆದರೆ ಆಧುನಿಕವಾದ ಯಾವುದೇ ಸೌಲಭ್ಯಗಳಿಲ್ಲದೇ ಜೀವನವನ್ನು ನಡೆಸಬಹುದು ಎಂಬುದನ್ನು ಇವರು ಬದುಕಿ ತೋರಿಸುತ್ತಿದ್ದಾರೆ.
Advertisement
ಸೌಮ್ಯಾ ಅವರು ತಮ್ಮ ಪತಿಯ ಜೊತೆಯಲ್ಲಿ 2015 ರಿಂದ ಡೆಹ್ರಾಡೂನ್‍ನ ಸಾಮಾನ್ಯ ಹಳ್ಳಿಯೊಂದರಲ್ಲಿ ವಾಸವಾಗಿದ್ದಾರೆ. ಇವರು ವಾಸವಿರುವ ಮನೆಗೆ ಸೋಲಾರ್ ಪ್ಯಾನ್ ಹಾಕಿಕೊಂಡಿದ್ದಾರೆ. ಮಳೆ ನೀರು ಕೊಯ್ಲು ಮೂಲಕವಾಗಿ ನೀರಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಹೀಗಾಗಿ ಇವರಿಗೆ ಕರೆಂಟ್ ಮತ್ತು ನೀರಿನ ಬಿಲ್ ಕಟ್ಟುವ ಸಂದರ್ಭವೇ ಬಂದಿಲ್ಲ.
Advertisement
ಇವರು ವಾಸವಿರುವ ಮನೆಯೂ ಕೂಡ ವಿಶೇಷವಾಗಿದೆ. ಬಿದಿರು ಹಾಗೂ ಇನ್ನಿತರ ಮರಗಳನ್ನು ಸೇರಿಸಿ ಮನೆಯ ನಿರ್ಮಾಣವನ್ನು ಝೀರೋ ವೇಸ್ಟೇಜ್‍ನಲ್ಲಿ ಮನೆಯ ನಿರ್ಮಾಣ ಮಾಡಿಕೊಂಡಿದ್ದಾರೆ. ಇವರು ಬಳಸುತ್ತಿರುವ ಕಾರಿನಿಂದ ಕೂಡ ಹೊಗೆ ಬರುವುದಿಲ್ಲ. ಕಾರಣ ಈ ಕಾರು ಮಹೀಂದ್ರಾ ಇ-20 ವಿದ್ಯುತ್ ಬ್ಯಾಟರಿ ಆಧರಿಸಿ ಕಾರು ಓಡುತ್ತದೆ. 2015 ರಿಂದ ಈ ಕಾರನ್ನೇ ಬಳಸುತ್ತಿದ್ದಾರೆ.
Advertisement
ದಂಪತಿ ಪರಿಸರ ಪ್ರೇಮಿಗಳು ಶೂನ್ಯ ತ್ಯಾಜ್ಯ ಮತ್ತು ಸುಸ್ಥಿರ ಜೀವನವನ್ನು ನಡೆಸುತ್ತಾರೆ. ತಮಗೆ ಬೇಕಾಗಿರುವ ತರಕಾರಿಗಳನ್ನು ತೋಟದಲ್ಲೇ ಬೆಳೆಯುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರ ಬಳಕೆ ಮಾಡದೇ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಬಳಕೆ ಮಾಡುತ್ತಾರೆ. ಇವರ ಮಾದರಿ ಜೀವ ತುಂಬಾ ವಿಶೇಷವಾಗಿದೆ. ಪರಿಸರ ಕಾಳಜಿಯನ್ನು ಹೊತ್ತಿರುವ ದಂಪತಿ ಎಲ್ಲರಿಗೆ ಮಾದರಿಯಾಗುವಂತೆ ಆಧುನಿಕ ಸೌಲಭ್ಯವಿದಲ್ಲದೇ ಜೀವನ ನಡೆಸಿ ತೊರಿಸುತ್ತಾ ಪರಿಸರ ಕಾಳಜಿಯನ್ನು ಹೊಂದಿದ್ದಾರೆ.