ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ರಷ್ಯಾಗೆ ಮೂರು ದಿನಗಳ ಪ್ರವಾಸಕ್ಕೆ ತೆರಳುತ್ತಿದ್ದಾರೆ.
ಜೂ. 24ರಂದು ರಷ್ಯಾದ ಮಾಸ್ಕೋದಲ್ಲಿ ನಡೆಯುವ “ವಿಕ್ಟರಿ ಡೇ ಪೆರೇಡ್”ನಲ್ಲಿ ಭಾಗಿಯಾಗಲು ರಾಜ್‍ನಾಥ್ ಸಿಂಗ್ ಅವರು ಹೋಗಲಿದ್ದಾರೆ. 2ನೇ ಮಹಾಯುದ್ಧದ ವಿಜಯದ 75ನೇ ವಾರ್ಷಿಕೋತ್ಸವ ರಷ್ಯಾ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಭಾರತದ ಪರವಾಗಿ ರಾಜನಾಥ್ ಸಿಂಗ್ ಹೋಗಲಿದ್ದಾರೆ.
Advertisement
Advertisement
ಜರ್ಮನಿ ವಿರುದ್ಧ ಎರಡನೇ ಮಹಾಯುದ್ಧ ಜಯಿಸಿದ ಸಂಭ್ರಮದ ಅಂಗವಾಗಿ ರಷ್ಯಾ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮಕ್ಕೆ ರಷ್ಯಾ ದೇಶದ ರಕ್ಷಣಾ ಸಚಿವ ಸೆರ್ಗೆ ಶೋಯಿಗು ಅವರು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಆಹ್ವಾನಿಸಿದ್ದರು. ಈ ಆಹ್ವಾನದ ಮೇರೆಗೆ ಭಾರತೀಯ ಸೇನೆಯ 3 ವಿಭಾಗಗಳ 75 ಸೈನಿಕರು ಸೇರಿ ರಾಜನಾಥ್‍ಸಿಂಗ್ ಅವರು ಕೂಡ ಮೂರು ದಿನ ರಷ್ಯಾಗೆ ಹೋಗಲಿದ್ದಾರೆ.
Advertisement
I wish a safe journey to Defence Minister of strategic partner India Shri @rajnathsingh who is scheduled to depart to Moscow on Monday to witness the Great #VictoryDay Military Parade on June 24#Victory75 #VDay pic.twitter.com/6KUg9FGKCD
— Denis Alipov ???????? (@AmbRus_India) June 20, 2020
Advertisement
ಈ ಕಾರ್ಯಕ್ರಮ ಮೇ 9ರಂದು ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮುಂದಕ್ಕೆ ಹೋಗಿತ್ತು. ಹೀಗಾಗಿ ಈ ಕಾರ್ಯಕ್ರಮವನ್ನು ಜೂನ್ 24ರಂದು ನಡೆಸಲು ರಷ್ಯಾ ತೀರ್ಮಾನ ಮಾಡಿದೆ. ಜೂನ್ 24ರಂದು ನಡೆಯುವ ವಿಕ್ಟರಿ ಡೇ ಪೆರೇಡ್‍ಗಾಗಿ ಸೋಮವಾರ ರಷ್ಯಾಗೆ ತೆರಳುತ್ತಿರುವ ರಾಜನಾಥ್ ಸಿಂಗ್ ಅವರ ಪ್ರಯಾಣ ಸುರಕ್ಷಿತವಾಗಿರಲಿ ಎಂದು ಬಯಸುತ್ತೇನೆ ಎಂದು ರಷ್ಯಾದ ರಾಯಭಾರಿ ನಿಕೋಲಾಯ್ ಕುಡಾಶೇವ್ ಅವರು ಟ್ವೀಟ್ ಮಾಡಿದ್ದಾರೆ.