ಬೆಂಗಳೂರು: ಐಟಿ ಸಂಸ್ಥೆ ಕಾಗ್ನಿಜೆಂಟ್ ಕಳೆದ ಮೂರು ತಿಂಗಳಿನಲ್ಲಿ 9 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ.
ಈ ಹಿಂದೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಾಗ್ನಿಜೆಂಟ್ ಕಂಪನಿಯಲ್ಲಿ ಒಟ್ಟು 2,91,700 ಮಂದಿ ಉದ್ಯೋಗಿಗಳಿದ್ದರು. ಆದರೆ ಜೂನ್‌ನಲ್ಲಿ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಉದ್ಯೋಗಿಗಳ ಸಂಖ್ಯೆ 2,81,200ಕ್ಕೆ ಕುಸಿದಿದೆ.
Advertisement
Advertisement
Advertisement
ಕೋವಿಡ್ ಸಮಯದಲ್ಲಿ ಐಟಿ ಕಂಪನಿಗಳು ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವುದು ಹೊಸ ಸುದ್ದಿಯಲ್ಲ. ಮೂರು ತಿಂಗಳ ಅವಧಿಯಲ್ಲಿ ಟಿಸಿಎಸ್ 4,786, ಇನ್ಫೋಸಿಸ್ 3,138, ವಿಪ್ರೋ 1,082, ಟೆಕ್ ಮಹೀಂದ್ರಾ 1,820 ಮಂದಿಯನ್ನು ತೆಗೆದು ಹಾಕಿದೆ ಎಂದು ವರದಿಯಾಗಿದೆ.
Advertisement
ಜೂನ್ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕಾಗ್ನಿಜೆಂಟ್ ಕಂಪನಿಯ ಆದಾಯ ಶೇ.3.4ರಷ್ಟು ಕುಸಿತಗೊಂಡು 4 ಶತಕೋಟಿ ಡಾಲರ್ ಗಳಿಸಿತ್ತು. ಕಾಗ್ನಿಜೆಂಟ್ ಇತಿಹಾಸದಲ್ಲಿ ಅತಿ ಕಡಿಮೆ ಆದಾಯ ದಾಖಲಾದ ತ್ರೈಮಾಸಿಕ ಇದಾಗಿದ್ದು ಹೀಗಾಗಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಮಾಡಲು ಮುಂದಾಗಿದೆ.