ಬೆಂಗಳೂರು: ಮೂರು ತಿಂಗಳಿನಿಂದ ಬೆಡ್‌ರೆಸ್ಟ್‌ನಲ್ಲಿದ್ದ ವ್ಯಕ್ತಿಗೆ ಕೊರೊನಾ ಸೋಂಕು ಕಂಡುಬಂದಿದ್ದು, ಈ ಪ್ರಕರಣ ಆರೋಗ್ಯ ಇಲಾಖೆಗೆ ಕಗ್ಗಂಟಾಗಿದೆ.
ರೋಗಿ 1270 ರಿಂದ 92 ಮಂದಿಗೆ ಕಂಟಕವಾಗಿದೆ. ಈ ವ್ಯಕ್ತಿ ಎಲ್ಲೂ ಓಡಾಡಿಲ್ಲ, ಟ್ರಾವೆಲ್ ಹಿಸ್ಟರಿಯೂ ಇಲ್ಲ. ಹೀಗಾಗಿ ಈ ವ್ಯಕ್ತಿಗೆ ಕೊರೊನಾ ಹಬ್ಬಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ. ವ್ಯಕ್ತಿ ಟಿಬಿ, ನ್ಯುಮೋನಿಯಾದಿಂದ ಬಳಲುತ್ತಾ ಇದ್ದರು. ಆದರೂ ಕುಡಿತದ ಚಟ ಬಿಟ್ಟಿರಲಿಲ್ಲ. ಹೀಗಾಗಿ ಬೆಡ್ ರೆಸ್ಟ್ ನಲ್ಲಿದ್ದ ಮಗನಿಗೆ ಸ್ವತಃ ತಾಯಿಯೇ ಎಣ್ಣೆ ಸಪ್ಲೈ ಮಾಡುತ್ತಿದ್ದರು. ಹೀಗಾಗಿ ತಾಯಿಯಿಂದಲೇ ಮಗನಿಗೆ ಸೋಂಕು ಹರಡಿತಾ ಅನ್ನೋ ಅನುಮಾನ ಮೂಡಿದೆ.
ಒಂದೇ ಮನೆಯಲ್ಲಿ ತಾಯಿ, ತಂಗಿ ಮತ್ತು ತಂಗಿ ಮಗ ವಾಸವಾಗಿದ್ದಾರೆ. ಸೊಂಕು ಪತ್ತೆಯಾಗಿದ್ದ ದಿನ ತಂಗಿ ಗಾರ್ಮೆಂಟ್ಸ್ ಗೆ ಹೋಗಿದ್ದಾರೆ. ಗಾರ್ಮೆಂಟ್ಸ್ ಹೋಗಿದ್ದ ಪರಿಣಾಮ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡ್ತಿದ್ದ 30 ಜನರನ್ನ ಕ್ವಾರಂಟೈನ್ ಮಾಡಲಾಗಿದೆ. ಒಟ್ಟು 92 ಜನರನ್ನ ಕ್ವಾರಂಟೈನ್ ಮಾಡಿದ್ದಾರೆ.
ಇಂದು ಹೈ ರಿಸ್ಕ್ ಇರುವ 21 ಜನರಿಗೆ ಗಂಟಲು ದ್ರವ ಪರೀಕ್ಷೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯಿಂದ ಇಡೀ ಕೆ.ಜಿ ಹಳ್ಳಿಗೆ ಗಂಡಾಂತರ ಕಾದಿದೆಯಾ ಅನ್ನೋ ಆತಂಕ ಸೃಷ್ಟಿಯಾಗಿದೆ.