ಬೆಂಗಳೂರು: “ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್‌ನಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪೋಸ್ಟ್ ಮಾಡಿದರೆ ನಿಮ್ಮ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. 3 ಕೆಂಪು ಟಿಕ್ ಮಾರ್ಕ್ ಇದ್ದಲ್ಲಿ ಸರ್ಕಾರ ನಿಮ್ಮ ವಿರುದ್ಧ ಕ್ರಮ ಕೈಗೊಂಡಿದ್ದು, ಕೋರ್ಟ್ ನಿಮಗೆ ಶೀಘ್ರವೇ ಸಮನ್ಸ್ ಜಾರಿ ಮಾಡಲಿದೆ” ಎಂಬ ಸಂದೇಶ ಇರುವ ಮೆಸೇಜ್‍ಗಳನ್ನು ಶೇರ್ ಮಾಡಬೇಡಿ.
ಸಾಮಾಜಿಕ ಜಾಲತಾಣ ಮತ್ತು ಮೆಸೇಜಿಂಗ್ ಅಪ್ಲಿಕೇಶನ್ ಗಳಲ್ಲಿ ಫೇಕ್ ನ್ಯೂಸ್, ಮಕ್ಕಳ ಅಶ್ಲೀಲ ವಿಡಿಯೋ/ ಫೋಟೋ ಇತ್ಯಾದಿಗಳಿಗೆ ನಿಯಂತ್ರಣ ಹೇರಲು ಮಾಹಿತಿ ತಂತ್ರಜ್ಞಾನ ಇಲಾಖೆ ಕೆಲ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಐಟಿ ದಿಗ್ಗಜ ಕಂಪನಿಗಳಿಗೆ ನೋಟಿಸ್ ನೀಡಿದ ವಿಚಾರ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಈ ಫೇಕ್ ಮೆಸೇಜ್‍ಗಳು ಹರಿದಾಡುತ್ತಿದೆ. ಈ ಸಂಬಂಧ ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ತಿಳಿಸಿದೆ.
Advertisement
Do not fall for such #Whatsapp messages being circulated.
No such thing is being done by the Government.
However, everyone is advised to not share any false news/misinformation concerning #CoronavirusInIndia
For authentic information follow @MoHFW_INDIA and @pib_India pic.twitter.com/XBErXb1CSP
— PIB Fact Check (@PIBFactCheck) March 24, 2020
Advertisement
ಫೇಕ್ ಮೆಸೇಜ್‍ನಲ್ಲಿ ಏನಿದೆ?
ಎಲ್ಲ ಕರೆಗಳು ರೆಕಾರ್ಡ್ ಆಗುತ್ತದೆ. ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್ ಅನ್ನು ಸರ್ಕಾರ ನಿಯಂತ್ರಣದಲ್ಲಿದೆ. ಸರ್ಕಾರ, ಪ್ರಧಾನಿ ಮೋದಿ ವಿರುದ್ಧ ಪೋಸ್ಟ್ ಮಾಡಬೇಡಿ. ಒಂದು ವೇಳೆ ಪೋಸ್ಟ್ ಮಾಡಿದರೆ ಪೊಲೀಸರು ನೋಟಿಸ್ ನೀಡಿ ನಿಮ್ಮ ಮೇಲೆ ಸೈಬರ್ ಕ್ರೈಂ ಅಡಿ ಕೇಸ್ ದಾಖಲಿಸುತ್ತಾರೆ. ಇದು ಬಹಳ ಅಪಾಯಕಾರಿ ಎಂದು ಬರೆಯಲಾಗಿದೆ. ಇದನ್ನೂ ಓದಿ : ಕೋವಿಡ್ 19 ವೈರಸ್ ಮಾನವ ಸೃಷ್ಟಿ ಪೋಸ್ಟ್ ಡಿಲೀಟ್ ಮಾಡಲ್ಲ – ಫೇಸ್‍ಬುಕ್
Advertisement
Advertisement
ಸತ್ಯ ಏನು?
ಸಾಮಾಜಿಕ ಜಾಲತಾಣದಲ್ಲಿ ಎಲ್ಲ ಪೋಸ್ಟ್ ಗಳನ್ನು ಸರ್ಕಾರ ಗಮನಿಸುವುದಿಲ್ಲ. ವಾಟ್ಸಪ್‍ನಲ್ಲಿ ಇಬ್ಬರ ನಡುವಿನ ಸಂದೇಶಗಳು ಇಬ್ಬರಿಗೆ ಮಾತ್ರ ತಿಳಿದಿರುತ್ತದೆ. ಒಂದು ವೇಳೆ ಪೋಸ್ಟ್ ನಿಂದ ಸಾಮಾಜಕ್ಕೆ ಹಾನಿಯಾಗುವ ಅಂಶ, ಗಲಭೆಗೆ ಪ್ರಚೋದನೆ, ಸುಳ್ಳು ಮಾಹಿತಿಗಳು ಇದ್ದು ಸರ್ಕಾರದ ಗಮನಕ್ಕೆ ಬಂದಲ್ಲಿ ಆಗ ಆ ಪೋಸ್ಟ್ ಮೂಲ ಪತ್ತೆ ಹಚ್ಚಲು ಮುಂದಾಗುತ್ತದೆ. ಈ ಸಂಬಂಧ ಕಂಪನಿಗಳಿಗೆ ಪತ್ರ ಬರೆದು ಈ ಪೋಸ್ಟ್ ಮೊದಲು ಪ್ರಕಟಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುತ್ತದೆ.
ಕೆಲವೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾದ ಪೋಸ್ಟ್ ಗಳು ಸುಳ್ಳು, ಗಲಭೆಗೆ ಪ್ರಚೋದನೆ ನೀಡುತ್ತಿದೆ ಎಂದು ಭಾರೀ ಸಂಖ್ಯೆಯಲ್ಲಿ ಜನರೇ ರಿಪೋರ್ಟ್ ಮಾಡಿದ್ದಲ್ಲಿ ಆಗ ಕಂಪನಿಗಳು ಸ್ವಯಂ ಪರಿಶೀಲಿಸಿ ಆ ಪೋಸ್ಟ್ ಗಳನ್ನು ಡಿಲೀಟ್ ಮಾಡುತ್ತವೆ.