ಲಕ್ನೋ: 2020ರಲ್ಲಿ ಭಾರತಕ್ಕೆ ಆಗಮಿಸಿದ ಡೋನಾಲ್ಡ್ ಟ್ರಂಪ್‍ಗೆ ಭದ್ರತಾ ತಂಡದಲ್ಲಿ ಭಾಗವಹಿಸಿದ್ದ ಸ್ನಿಫರ್ ಶ್ವಾನ ಡಿಕಿಯ ಜನ್ಮದಿನವನ್ನು ಶನಿವಾರ ಮುಜಾಫರ್‍ನಗರದ ಪೊಲೀಸರು ಆಚರಿಸಿದ್ದಾರೆ.
3ನೇ ವಸಂತಕ್ಕೆ ಕಾಲಿಟ್ಟಿರುವ ಡಿಕಿಗೆ ಕೇಕ್ ಕಟ್ ಮಾಡಲು ಸುನೀಲ್ ಕುಮಾರ್ ಸಹಾಯ ಮಾಡಿದ್ದಾರೆ. ಬರ್ತ್‍ಡೇ ಕ್ಯಾಪ್ ಧರಿಸಿದ ಡಿಕಿ ಕೋರೆ ಹಲ್ಲುಗಳನ್ನು ಹೊಂದಿದ್ದು, ಗಂಭೀರವಾಗಿ ಕುಳಿತು ಎಲ್ಲರನ್ನು ನೋಡುತ್ತಿತ್ತು. ನಂತರ ಪೊಲೀಸರು ಕೇಕ್ ಕತ್ತರಿಸಿದರು.
ಲ್ಯಾಬ್ರಡಾರ್ ರಿಟ್ರೈವರ್‍ಗೆ ಉಡುಗೊರೆಯಾಗಿ ಕೋಟ್ ಸಿಕ್ಕಿದೆ. ವಿಶೇಷವೆಂದರೆ ತನ್ನ ದಿನನಿತ್ಯದ ಊಟದ ಜೊತೆಗೆ ಹುಟ್ಟುಹಬ್ಬದಂದು ಡಿಕಿ ಮೊಟ್ಟೆ, ಮಾಂಸ, ಹಾಲು, ತರಕಾರಿ, ಬ್ರೆಡ್‍ನಂತೆ ಭರ್ಜರಿ ಊಟ ಸವಿಯಿತು.
ಡಿಕಿಗೆ ಇಂಡೋ-ಟಿಬೆಟಿಯನ್ ಗಡಿ ಭಾಗದ ಪೊಲೀಸರು ಹರಿಯಾಣದ ಪಂಚಕುಲದಲ್ಲಿ ತರಬೇತಿ ನೀಡಿದ ಬಳಿಕ 2019ರ ಆಗಸ್ಟ್‍ನಲ್ಲಿ ಮುಜಫರ್‍ನಗರಕ್ಕೆ ಬಂದಿದೆ. ಡಿಕಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿನ ಸ್ಪೋಟಕಗಳ ಕಾರ್ಯಾಚರಣೆಯ ವೇಳೆ ಪಾಲ್ಗೊಳ್ಳುತ್ತದೆ.