ರಾಯಚೂರು: ಜಿಲ್ಲೆಯ ಲಿಂಗಸುಗೂರಿನ 90 ವರ್ಷದ ಅಜ್ಜಿ ಎರಡನೇ ಬಾರಿ ಕೊರೊನಾ ಗೆದ್ದಿದೆ. ಸೋಂಕು ತಗುಲಿದೆ ಎಂದು ಎದೆಗುಂದದೆ ಆತ್ಮವಿಶ್ವಾಸದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ.
Advertisement
ಕೊರೊನಾ ಹೆದರಿಕೊಳ್ಳುವ ರೋಗವೇ ಅಲ್ಲ ಎಂದು ಹೇಳುತ್ತಿರುವ ಅಜ್ಜಿ ಈಶ್ಮರಮ್ಮ, ಕೊರೊನಾ ಗೆಲ್ಲಲು ಔಷಧಿಯಷ್ಟೇ ಅಲ್ಲ ಆತ್ಮವಿಶ್ವಾಸ ಬೇಕು ಎಂದು ಇತರರಿಗೆ ಧೈರ್ಯ ತುಂಬುತ್ತಿದ್ದಾರೆ. ಗುಣಮುಖರಾಗಿ ಮನೆಗೆ ಮರಳಿರುವ ಅಜ್ಜಿ ನಿಜಕ್ಕೂ ಎಲ್ಲರಿಗೂ ಸ್ಪೂರ್ತಿ. ವೈದ್ಯರು ಹೇಳಿದಂತೆ ಕೇಳಬೇಕು, ವ್ಯಾಯಾಮ ಮಾಡಬೇಕು ರೋಗ ತಾನೇ ಹೋಗುತ್ತೆ ಎಂದಿದ್ದಾರೆ.
Advertisement
Advertisement
ಫೆಬ್ರವರಿ ತಿಂಗಳಲ್ಲಿ ಮೊದಲ ಬಾರಿ ಸೋಂಕು ತಗುಲಿತ್ತು. ಲಿಂಗಸುಗೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಬಳಿಕ 10 ದಿನಗಳ ಕೆಳಗೆ ಪುನಃ ಸೋಂಕು ಧೃಡವಾಗಿತ್ತು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿ, ಗುಣಮುಖರಾಗಿ ಅಜ್ಜಿ ಮನೆಗೆ ಬಂದಿದ್ದಾರೆ. ಆಸ್ಪತ್ರೆಯಲ್ಲಿದ್ದಾಗ ಹೆದರಿದ್ದ ಮಕ್ಕಳು, ಮೊಮ್ಮಕ್ಕಳಿಗೆ ಅಜ್ಜಿಯೇ ಧೈರ್ಯ ತುಂಬಿ ಗುಣಮುಖರಾಗಿ ಬಂದಿದ್ದಾರೆ.