ಕಲಬುರಗಿ: ಜಿಲ್ಲೆಯ ಸುಪ್ರಸಿದ್ಧ ಶರಣಬಸವೇಶ್ವರ ಸಂಸ್ಥಾನಕ್ಕೆ ನೂತನ ಪೀಠಾಧಿಪತಿಯ ನೇಮಕ ಮಾಡಲಾಗಿದೆ. ತಮ್ಮ ಎರಡು ವರ್ಷದ ಪುತ್ರ ಚಿರಂಜೀವಿಯನ್ನು 9ನೇ ಪೀಠಾಧಿಪತಿಯಾಗಿ ಡಾ. ಶರಣಬಸಪ್ಪ ಅಪ್ಪಾ ಅವರು ಪೀಠದಲ್ಲಿ ಕೂರಿಸಿದ್ದಾರೆ.
ಪೀಠಾಲಂಕಾರ ಮಾಡುವ ಮುನ್ನ ಧಾರ್ಮಿಕ ಕಾರ್ಯ ನೆರವೇರಿಸಿ ಬೆಳ್ಳಿ ಕಿರಿಟ ತೊಡಿಸಿ, ಬಳಿಕ ಪೀಠದ ಮೇಲೆ ಮಗನನ್ನು ಡಾ. ಶರಣಬಸವಪ್ಪ ಅಪ್ಪಾ ಅವರು ಕೂರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಮತ್ತು ಸಂಸ್ಥಾನದ ಭಕ್ತರು ಉಪಸ್ಥಿತರಿದ್ದರು. 82 ವಯಸ್ಸಿಗೆ ಡಾ. ಶರಣಬಸಪ್ಪ ಅಪ್ಪಾ ಅವರು ಮಗುವನ್ನು ಪಡೆದು ಇಡೀ ರಾಜ್ಯವೇ ಕಲಬುರಗಿಯತ್ತ ನೋಡುವಂತೆ ಮಾಡಿದ್ದರು. ಇದನ್ನೂ ಓದಿ: 82ನೇ ವಯಸ್ಸಿನಲ್ಲಿ ಗಂಡು ಮಗುವಿಗೆ ತಂದೆಯಾದ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ
Advertisement
Advertisement
ಇದೀಗ ಅದೇ ಬಾಲಕನನ್ನು ಪೀಠಾಧಿಪತಿಯಾಗಿ ಮಾಡಲಾಗಿದೆ. ಕಲಬುರಗಿ ನಗರದಲ್ಲಿರುವ ಈ ಮಠದ ಅಡಿ ಹಲವು ಶಿಕ್ಷಣ ಸಂಸ್ಥೆಗಳು ನಡೆಯುತ್ತಿದ್ದು, ಅಂದಾಜು 8 ಸಾವಿರ ಕೋಟಿಗೂ ಅಧಿಕ ಆಸ್ತಿಯನ್ನು ಈ ಶಿಕ್ಷಣ ಸಂಸ್ಥೆ ಹೊಂದಿದೆ.