ಸೆಂಚೂರಿಯನ್: ಭಾರತದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ 135 ರನ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.
287 ರನ್ ಗಳ ಗುರಿಯನ್ನು ಪಡೆದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 50.2 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಆಯ್ತು. 3 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದ್ದ ಭಾರತ ತನ್ನ ಐದನೇ ದಿನದಾಟದಲ್ಲಿ 7 ವಿಕೆಟ್ ಗಳ ಸಹಾಯದಿಂದ ಕೇವಲ 116 ರನ್ ಕೂಡಿ ಹಾಕಿತು.
Advertisement
ರೋಹಿತ್ ಶರ್ಮಾ 47 ರನ್(74 ಎಸೆತ, 6 ಬೌಂಡರಿ, 1 ಸಿಕ್ಸರ್), ಮೊಹಮ್ಮದ್ ಶಮಿ 28 ರನ್(24 ಎಸೆತ, 5 ಬೌಂಡರಿ), ಪಾರ್ಥಿವ್ ಪಟೇಲ್ 19 ರನ್(49 ಎಸೆತ, 2 ಬೌಂಡರಿ) ಹೊಡೆದು ಔಟಾದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‍ಗಿಡಿ 12.2 ಓವರ್ ಹಾಕಿ 3 ಮೇಡನ್ ಮಾಡಿ 47 ರನ್ ನೀಡಿ 6 ವಿಕೆಟ್ ಕೀಳುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಕಗಿಸೊ ರಬಡಾ 3 ವಿಕೆಟ್ ಕಿತ್ತರು.
Advertisement
Advertisement
Advertisement
ವಿಶ್ವದಾಖಲೆ ಕೈ ತಪ್ಪಿತು:
ಈ ಪಂದ್ಯವನ್ನು ಸೋಲುವ ಮೂಲಕ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವದಾಖಲೆ ನಿರ್ಮಿಸುವ ಅಪೂರ್ವ ಅವಕಾಶವನ್ನು ಕಳೆದುಕೊಂಡಿದೆ. ತವರಿನಲ್ಲಿ ನಡೆದ ಲಂಕಾ ಸರಣಿಯನ್ನು ಗೆಲ್ಲುವ ಮೂಲಕ ಭಾರತ ಸತತ ಒಂಭತ್ತು ಸರಣಿ ಜಯವನ್ನು ದಾಖಲಿಸಿತ್ತು. ಈ ಜಯದೊಂದಿಗೆ ಕೊಹ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅವರ ಸಾಧನೆಯನ್ನು ಸರಿಗಟ್ಟಿದ್ದರು.
ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿದ್ದರೆ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗುತ್ತಿದ್ದರು. ಆದರೆ ಫಾ ಡು ಪ್ಲೇಸಿಸ್ ಪಡೆ 135 ರನ್ ಗಳಿಂದ ಗೆಲ್ಲುವ ಮೂಲಕ ಕೊಹ್ಲಿ ಕನಸನ್ನು ಭಗ್ನಗೊಳಿಸಿದೆ.