ಕ್ರೈಸ್ಟ್ ಚರ್ಚ್: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಮತ್ತೊಮ್ಮೆ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ಮಾಡಿ ಒಂದು ಕೈಯಲ್ಲಿ ಕ್ಯಾಚ್ ಹಿಡಿದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಶಮಿ ಎಸೆದ 72ನೇ ಓವರಿನ ಕೊನೆ ಎಸೆತವನ್ನು ನೀಲ್ ವ್ಯಾಗ್ನರ್ 21 ರನ್(41 ಎಸೆತ, 3 ಬೌಂಡರಿ) ಬಲವಾಗಿ ಹೊಡೆದರು. ಬಾಲ್ ಸಿಕ್ಸ್ ಅಥವಾ ಬೌಂಡರಿಗೆ ಹೋಯಿತು ಎಂದೇ ಭಾವಿಸುತ್ತಿದ್ದಾಗ ಡೀಪ್ ಸ್ಕ್ಯಾರ್ ಲೆಗ್ ನಲ್ಲಿದ್ದ ಜಡೇಜಾ ಗಾಳಿಯಲ್ಲಿ ಹಾರಿ ಎಡಗೈಯಲ್ಲಿ ಹಿಡಿದೇ ಬಿಟ್ಟರು.
Advertisement
Sir Jadeja for a reason!
Jadeja Airlines, flying high! ✈️
Terrific stuff, @imjadeja! #NZvIND pic.twitter.com/wn6WyVmhbA
— Mohammad Kaif (@MohammadKaif) March 1, 2020
Advertisement
ಬಾಲ್ ಜಡೇಜಾ ಕೈ ಸೇರಿದ್ದನ್ನು ನೋಡಿ ಶಮಿ ಸೇರಿದಂತೆ ಆಟಗಾರರು ಒಮ್ಮೆ ಆಶ್ಚರ್ಯಚಕಿತರಾಗಿ ಸಂತಸ ವ್ಯಕ್ತಪಡಿಸಿದರು. ಬೌಲಿಂಗ್‍ನಲ್ಲೂ ಮಿಂಚಿದ ಜಡೇಜಾ 10 ಓವರ್ ಎಸೆದು 2 ಮೇಡನ್ ಮಾಡಿ 22 ರನ್ ನೀಡಿ 2 ವಿಕೆಟ್ ಪಡೆದಿದ್ದಾರೆ.
Advertisement
ಜಡೇಜಾ ಕ್ಯಾಚ್ ಹಿಡಿದ ವಿಡಿಯೋ ವೈರಲ್ ಆಗಿದ್ದು, ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಟ್ವಿಟ್ಟರ್ ನಲ್ಲಿ ಜಡೇಜಾ ಕ್ಯಾಚ್ ಹಿಡಿದಿದ್ದನ್ನು ಪ್ರಶಂಸಿಸಿದ್ದಾರೆ. ವಾವ್, ಇತಿಹಾಸದ ಪುಟಗಳಲ್ಲಿ ಸೇರ್ಪಡೆಯಾಗಬಲ್ಲ ಕ್ಯಾಚ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಜಡೇಜಾ ಅವರನ್ನು ಅಭಿನಂದಿಸುತ್ತಿದ್ದಾರೆ. ಇದನ್ನೂ ಓದಿ: ಜಡೇಜಾ ರಾಕೆಟ್ ಥ್ರೋ, ಸ್ಟನ್ ಆದ ನೀಶಮ್ – ವಿಡಿಯೋ ನೋಡಿ
Advertisement
https://twitter.com/kingkohliaddict/status/1233949159780044801