– ತವರಲ್ಲಿ ಗೆಲ್ಲಿಸುವ ಜವಬ್ದಾರಿ ಕೋಚ್ ಕುಂಬ್ಳೆಗೆ
ಬೆಂಗಳೂರು: ವಿಶ್ವ ಶ್ರೇಷ್ಠ ತಂಡಗಳಾದ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಇಂದಿನಿಂದ 2ನೇ ಟೆಸ್ಟ್ ಕದನ ಶುರುವಾಗಲಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜಾಗಿದೆ. ಪುಣೆಯಲ್ಲಿ ಭಾರತಕ್ಕೆ ಸೋಲುಣಿಸುವ ಮೂಲಕ 1-0 ಮುನ್ನಡೆ ಸಾಧಿಸಿರುವ ಸ್ಟೀವ್ ಸ್ಮಿತ್ ಪಡೆ ಗೆಲುವಿನ ಹುಮ್ಮಸ್ಸಿನಲ್ಲಿದೆ. ಆದ್ರೆ ಸೋಲಿನ ಸೇಡು ತೀರಿಸಿಕೊಳ್ಳೋಕೆ ಕೊಹ್ಲಿ ಹುಡುಗರು ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಎರಡು ತಂಡಗಳಲ್ಲೂ ಬಲಿಷ್ಠ ಆಟಗಾರರಿದ್ದಾರೆ. ಟೀಂ ಇಂಡಿಯಾಗೆ ಕಳಪೆ ಬ್ಯಾಟಿಂಗ್ ಪ್ರದರ್ಶನ ದೊಡ್ಡ ಹೊಡೆತ ಕೊಟ್ಟಿದೆ. ಟೀಂ ಇಂಡಿಯಾ ಕೋಚ್ ಅನಿಲ್ ಕುಂಬ್ಳೆಗೆ ತವರು ನೆಲದಲ್ಲಿ ತಂಡವನ್ನು ಗೆಲುವಿನ ಹಳಿಗೆ ತರುವ ದೊಡ್ಡ ಜವಾಬ್ದಾರಿಯಿದೆ. ಜೊತೆಗೆ ಆಸೀಸ್ ಬ್ಯಾಟಿಂಗ್ ಪಡೆಯನ್ನ ಕಟ್ಟಿಹಾಕುವ ಆಯುಧಗಳಾದ ಅಶ್ವಿನ್, ಜಡೇಜಾ ಸರಿಯಾಗಿ ಆಡಿದ್ರೆ ಆದ್ರೆ ಕಾಂಗೂರುಗಳ ಬೆನ್ನೆಲುಬು ಮುರಿಯೋದು ಸುಲಭ.
Advertisement
ಚಿನ್ನಸ್ವಾಮಿ ಅಂಗಳದಲ್ಲಿ ಆಸೀಸ್ ವಿರುದ್ಧ ಟೀಂ ಇಂಡಿಯಾ ಇದುವರೆಗೆ 05 ಟೆಸ್ಟ್ ಪಂದ್ಯಗಳನ್ನ ಆಡಿದ್ದು, 1ರಲ್ಲಿ ಜಯಭೇರಿ ಬಾರಿಸಿದೆ. ಆಸ್ಟ್ರೇಲಿಯಾ 2 ರಲ್ಲಿ ಗೆಲುವು ದಾಖಲಿಸಿದೆ. ಇನ್ನು 2 ಪಂದ್ಯಗಳಲ್ಲಿ ಫಲಿತಾಂಶ ಬಾರದೆ ಡ್ರಾನಲ್ಲಿ ಅಂತ್ಯವಾಗಿದೆ.
Advertisement
ಒಟ್ನಲ್ಲಿ ಆಸೀಸ್ ಹಿಸ್ಟ್ರಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನಾಗಿದೆ. ಆದ್ರೆ ಕುಂಬ್ಳೆ ಭಾರತಕ್ಕೆ ಪ್ಲಸ್ ಪಾಯಿಂಟ್ ಆಗಿದ್ದು, ಕೊಹ್ಲಿ ಪಡೆಯನ್ನ ಯಾವ ರೀತಿ ಗೆಲುವಿನ ಟ್ರ್ಯಾಕ್ ಗೆ ತರ್ತಾರೆ ಕಾದು ನೋಡ್ಬೇಕು.
Advertisement
#TeamIndia head coach @anilkumble1074 inspects the pitch #INDvAUS pic.twitter.com/rTysd00efB
— BCCI (@BCCI) March 4, 2017