ಬೆಂಗಳೂರು: ಜೀ ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಸೆಕೆಂಡ್ ರನ್ನರ್ ಅಪ್ ಆಗಿ ಸಾಧ್ವಿನಿ ಹೊರಹೊಮ್ಮಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸಾಧ್ವಿನಿ ಅವರು, ಸರಿಗಮಪ ಶೋ ಕಾರ್ಯಕ್ರಮದ ಪಯಣ ತುಂಬಾ ಚೆನ್ನಾಗಿತ್ತು. ಸೆಕೆಂಡ್ ರನ್ನರ್ ಅಪ್ ಆಗಿರುವುದಕ್ಕೆ ಖುಷಿಯಾಗುತ್ತಿದೆ. ಎಲ್ಲರೂ ಒಂದೇ ಕುಟುಂಬದ ರೀತಿ ಇದ್ವಿ. ಎಲ್ಲರು ಸ್ನೇಹಿತರಾಗಿದ್ದೇವೆ. ಈ ವೇದಿಕೆಯಿಂದ ತುಂಬಾ ವಿಷಯ ಕಲಿತಿದ್ದೇನೆ ಎಂದು ಹೇಳಿದ್ದಾರೆ.
ಸರಿಗಮಪ ಸೀಸನ್ ನನಗೆ ಜೀವನದ ಒಂದು ಪಾಠವನ್ನು ಹೇಳಿಕೊಟ್ಟಿದೆ ಎಂದು ಹೇಳೋಕೆ ನಾನು ಇಷ್ಟ ಪಡುತ್ತೇನೆ. ಟಾಪ್ 3, ಸೆಕೆಂಡ್ ರನ್ನರ್ ಅಪ್ ಆಗಿರುವುದಕ್ಕೆ ತುಂಬಾ ಖುಷಿಕೊಟ್ಟಿದೆ. ನಮ್ಮ ತಂದೆ, ಅವರ ಅಮ್ಮ ಹಾಡನ್ನು ಹಾಡುತ್ತಿದ್ದರು. ಹೀಗಾಗಿ ನನಗೆ ಸಂಗೀತ ಪರಂಪರೆಯಿಂದ ಬಂದಿದೆ ಎಂದರು.
ನಮ್ಮ ಅಪ್ಪ-ಅಮ್ಮ ನೀನು ಸಿಂಗರ್ ಆಗಬೇಕೆಂದು ಬೆಂಬಲಿಸಿ ನನ್ನೊಳಗಿದ್ದ ಪ್ರತಿಭೆಯನ್ನು ತೋರಿಸಿಕೊಟ್ಟಿದ್ದಾರೆ. ನಾನು ಏನೆ ಸಾಧನೆ ಮಾಡಬೇಕಾದರೂ, ಮಾಡಿದರು ಅವರೇ ಕಾರಣರಾಗಿದ್ದಾರೆ. ನನಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದಾರೆ ಎಂದು ಸಾಧ್ವಿನಿ ಹೇಳಿದ್ದಾರೆ.
ಯಾರೆ ಗೆದ್ದರು ಖುಷಿಯಾಗುತ್ತದೆ. ಇಂತಹ ವೇದಿಕೆಯಲ್ಲಿ ನಾವು ಭಾಗಿಯಾಗಿದ್ದೇವೆ ಎಂಬುದೇ ಸಂತಸದ ವಿಚಾರವಾಗಿದೆ. ಅದರಲ್ಲೂ ಸಂಗೀತ ದಿಗ್ಗಜರು ಹಂಸಲೇಖ ಅವರ ಮುಂದೆ ನಾನು ಹಾಡಿದ್ದೇವೆ. ಜೊತೆಗೆ ಒಳ್ಳೆಯ ಸಂಗೀತಗಾರರ ಮುಂದೆ ಹಾಡಲು ನಮಗೆ ಸಿಕ್ಕಿರುವ ದೊಡ್ಡ ಅವಕಾಶ ಇದಾಗಿತ್ತು. ಅದನ್ನು ನಾನು ಚೆನ್ನಾಗಿ ನಿರ್ವಹಿಸಿಕೊಂಡು ಟಾಪ್ 3ಗೆ ಬಂದಿದ್ದೇನೆ ಎಂಬ ಹೆಮ್ಮೆ ಇದೆ ಎಂದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv