ಬೆಂಗಳೂರು: ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ(2nd PUC) ಪೂರಕ ಪರೀಕ್ಷೆ(Exam) ಫಲಿತಾಂಶ(Result) ಪ್ರಕಟಗೊಂಡಿದೆ. ಈ ಬಾರಿಯ ಪೂರಕ ಪರೀಕ್ಷೆಯಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಪೂರಕ ಪರೀಕ್ಷೆಯಲ್ಲಿ ಸುಮಾರು 1,75,905 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರ ಪೈಕಿ 65,233 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಒಟ್ಟಾರೆ ಫಲಿತಾಂಶ 37.08% ಬಂದಿದೆ. ಪಾಸ್ ಆದವರ ಪೈಕಿ ಬಾಲಕರು 36,637 (34.91%) ಹಾಗೂ ಬಾಲಕಿಯರು 28,596 (40.30%) ಪಾಸ್ ಆಗಿದ್ದಾರೆ. ಇದನ್ನೂ ಓದಿ: ಷರತ್ತು ವಿಧಿಸಿ ಭಾರತಕ್ಕೆ ಇನ್ನಷ್ಟು ಡಿಸ್ಕೌಂಟ್ ದರದಲ್ಲಿ ತೈಲ ನೀಡಲು ಮುಂದಾದ ರಷ್ಯಾ
Advertisement
Advertisement
ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಕೆ ಕೊನೆ ದಿನ ಸೆಪ್ಟೆಂಬರ್ 15ಕ್ಕೆ ನಿಗದಿ ಮಾಡಲಾಗಿದೆ. ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಕೆ ಕೊನೆ ದಿನ ಸೆಪ್ಟೆಂಬರ್ 21 ರಿಂದ 25 ನೀಡಲಾಗಿದೆ. ಸ್ಕ್ಯಾನಿಂಗ್ ಪ್ರತಿ ಪಡೆದವರು ಮಾತ್ರ ಮರು ಎಣಿಕೆ, ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬೇಕು ಅಂತ ನಿಯಮ ರೂಪಿಸಲಾಗಿದೆ. ಇದನ್ನೂ ಓದಿ: ಸದನದ ಸಮಯ ಹಾಳು ಮಾಡಲಾರೆ: ಹೆಚ್‌ಡಿಕೆ