– ಪಿಯು ಬೋರ್ಡ್‍ನಿಂದ ಮಾರ್ಗಸೂಚಿ ರಿಲೀಸ್
ಬೆಂಗಳೂರು: ಕೊರೊನಾ 3ನೇ ಅಲೆ ಆತಂಕದ ನಡುವೆ ದ್ವಿತೀಯ ಪಿಯುಸಿ ಎಕ್ಸಾಂ ನಡೀತಿದೆ. ಖಾಸಗಿ ಅಭ್ಯರ್ಥಿಗಳು ಮತ್ತು ಸರ್ಕಾರ ಕೊಟ್ಟ ಫಲಿತಾಂಶ ರಿಜೆಕ್ಟ್ ಮಾಡಿದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುತ್ತಿದ್ದು, ಕಠಿಣ ಮಾರ್ಗಸೂಚಿ ಅಡಿ ಪರೀಕ್ಷೆ ನಡೆಸಲು ಪಿಯುಸಿ ಬೋರ್ಡ್ ಮುಂದಾಗಿದೆ.
ನಾಳೆಯಿಂದ ಸೆಪ್ಟೆಂಬರ್ 3 ವರೆಗೆ ಪರೀಕ್ಷೆ ನಡೆಯಲಿದೆ. ಮೊದಲ ದಿನವಾದ ನಾಳೆ ಐಚ್ಛಿಕ ಕನ್ನಡ, ಗಣಿತ ಮತ್ತು ಬೇಸಿಕ್ ಗಣಿತ ಪರೀಕ್ಷೆಗಳು ನಡೆಯಲಿವೆ. ದ್ವಿತಿಯ ಪಿಯುಸಿ ಪರೀಕ್ಷೆ ಫಲಿತಾಂಶ ರಿಜೆಕ್ಟ್ ಮಾಡಿದ್ದ 945 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 18 ಸಾವಿರದ 414 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
Advertisement
Advertisement
ಈ ನಡುವೆ ಕಾಲೇಜು ಆರಂಭಕ್ಕೆ ಪಿಯು ಬೋರ್ಡ್ ಮಾರ್ಗಸೂಚಿ ರಿಲೀಸ್ ಮಾಡಿದೆ. ಈ ತಿಂಗಳ 23 ರಿಂದ ಪ್ರಥಮ ಮತ್ತು ದ್ವೀತಿಯ ಪಿಯುಸಿ ತರಗತಿಗಳು ಶುರುವಾಗಲಿದೆ. ಇದನ್ನೂ ಓದಿ: ಎತ್ತಿನಹೊಳೆ ಹಣ ಮಾಡುವ ಯೋಜನೆ: ಕುಮಾರಸ್ವಾಮಿ
Advertisement
ಮಾರ್ಗಸೂಚಿಗಳೇನು..?
ಆನ್‍ಲೈನ್ ಅಥವಾ ಆಫ್‍ಲೈನ್ ಕ್ಲಾಸ್‍ಗೆ ಹಾಜರಾತಿ ಕಡ್ಡಾಯವಾಗಿರುತ್ತದೆ. ಭೌತಿಕ ತರಗತಿಗೆ ಹಾಜರಾಗೋದು ಕಡ್ಡಾಯ ಅಲ್ಲ. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ತರುವುದು ಕಡ್ಡಾಯವಾಗಿದೆ. 50:50 ಪಾಳಿಯಲ್ಲಿ ತರಗತಿ ನಡೆಸಲು ಸೂಚನೆ ನೀಡಲಾಗಿದೆ. ಮೊದಲ ಬ್ಯಾಚ್‍ಗೆ 3 ದಿನ, 2ನೇ ಬ್ಯಾಚ್‍ಗೆ 3 ದಿನ ಕ್ಲಾಸ್ ನಡೆಯಲಿದೆ. ಹಾಗೂ 50 ವರ್ಷ ಮೇಲ್ಪಟ್ಟ ಉಪನ್ಯಾಸಕರಿಗೆ ಫೇಸ್ ಶೀಲ್ಡ್ ಕಡ್ಡಾಯ ಮಾಡಲಾಗುತ್ತದೆ.