ಮಂಡ್ಯ: ಬೆಂಗಳೂರು-ಮೈಸೂರು ದಶಪಥ ರಾಷ್ಟ್ರೀಯ ಹೆದ್ದಾರಿಯ (Bengaluru- Mysuru Expressway) ಎರಡನೇ ಹಂತದ ಟೋಲ್ (Toll) ಇಂದಿನಿಂದ ಆರಂಭಗೊಂಡಿದೆ. ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಸಂಗ್ರಹಕ್ಕೆ ವಿರೋಧ ವ್ಯಕ್ತವಾಗಿದೆ.
ಟೋಲ್ ಸಂಗ್ರಹಕ್ಕೂ ಮುನ್ನವೇ ವಿವಿಧ ಕನ್ನಡಪರ ಹಾಗೂ ರೈತ ಪರ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯ್ತು. ಕೇಂದ್ರ ಸರ್ಕಾರ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಘೋಷಣೆ ಕೂಗಲಾಯ್ತು. ಪ್ರತಿಭಟನೆಯ ನಡುವೆಯೂ ಟೋಲ್ ಸಂಗ್ರಹ ಆರಂಭಿಸಿದ್ದಕ್ಕೆ ಪ್ರತಿಭಟನಾಕಾರರು ರಸ್ತೆಗೆ ಅಡ್ಡಲಾಗಿ ಕುಳಿತು ಕಿಡಿಕಾರಿದ್ರು.
Advertisement
Advertisement
ಇದೇ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ (Chaluvarayaswamy), ಇದು ಕೇಂದ್ರ ಸರ್ಕಾರದ ಉದ್ಧಟತನ. ಜನರಿಗೆ ಟೋಲ್ ಕಟ್ಟದಂತೆ ಕರೆ ನೀಡಲಾಗಿದೆ. ಟೋಲ್ ಸಂಗ್ರಹ ವಿರೋಧಿ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಕೇಂದ್ರ ಈ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಟೋಲ್ ಸಮಸ್ಯೆ ಬಗ್ಗೆ ಸಿದ್ದರಾಮಯ್ಯ ಗಮನಕ್ಕೆ ತರಲಾಗಿದೆ ಎಂದ್ರು.
Advertisement
ಈ ಮಧ್ಯೆ 2ನೇ ಹಂತದ ಟೋಲ್ ಸಂಗ್ರಹಕ್ಕೆ ಮೊದಲ ದಿನವೇ ಸ್ಕ್ಯಾನರ್ ಗಳು ಕೈಕೊಟ್ಟ ಘಟನೆಯೂ ನಡೆಯಿತು. ಫಾಸ್ಟ್ ಟ್ಯಾಗ್ ಸ್ಕ್ಯಾನ್ ಮಾಡಲು ಸಿಬ್ಬಂದಿ ಪರದಾಡಿದರು. ಫಾಸ್ಟ್ ಟ್ಯಾಗ್ ಸ್ಕ್ಯಾನ್ ಆಗದೆ ಇದ್ದರೆ ಒನ್ ಟು ಡಬಲ್ ಹಣ ವಸೂಲಿಗೆ ಸವಾರರು ಆಕ್ರೋಶ ಹೊರಹಾಕಿದ್ರು. ದುಡಿಯೋ ಮೂರು ಕಾಸಲ್ಲಿ ಇವರಿಗೆ ಎರಡು ಕಾಸು ಕೊಟ್ರೆ ಹೇಗೆ. ಸರಿಯಾಗಿ ರೋಡ್ ಮಾಡಿಲ್ಲ, ಆದರೂ ದುಡ್ಡು ಕಟ್ಟಬೇಕಾ ಅಂತ ಕಿಡಿಕಾರಿದ್ರು.
Advertisement
ಕೆಲ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಸರಿಪಡಿಸಿಕೊಳ್ತೀವಿ. ಸ್ಥಳೀಯ ವೈಟ್ ಬೋರ್ಡ್ ವಾಹನಗಳಿಗೆ ಪಾಸ್ ನೀಡುತ್ತೇವೆ ಅಂತ ಟೋಲ್ ಸಂಸ್ಥೆ ಹೇಳಿದೆ.
Web Stories