ಇಂದು SSLC 2ನೇ ದಿನದ ಪರೀಕ್ಷೆ – ಇವತ್ತೂ ಹಿಜಬ್‍ಧಾರಿ ವಿದ್ಯಾರ್ಥಿನಿಯರು ಗೈರಾಗ್ತಾರಾ..?

Public TV
1 Min Read
SSLC 2

ಬೆಂಗಳೂರು: ಇಂದು ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ 2ನೇ ದಿನದ ಪರೀಕ್ಷೆ ನಡೆಯಲಿದೆ. ಇಂದು ದ್ವಿತೀಯ ಭಾಷೆಯ ಪರೀಕ್ಷೆ ನಡೆಯಲಿದೆ.

SSLC

ಮೊದಲ ದಿನದ ಪರೀಕ್ಷೆಗೆ ಹಿಜಬ್ ನೆಪದಲ್ಲಿ ಗೈರಾಗಿದ್ದ ವಿದ್ಯಾರ್ಥಿನಿಯರು ಇಂದಾದ್ರೂ ಹಾಜರಾಗ್ತಾರಾ ಅಥವಾ ಗೈರು ಹಾಜರಿ ಮುಂದುವರೆಸ್ತಾರಾ..? ಎಂಬ ಕುತೂಹಲವಿದೆ. 2ನೇ ದಿನದ ಪರೀಕ್ಷೆ ಸುಸೂತ್ರವಾಗಿ ನಡೆಸಲು ಪರೀಕ್ಷಾ ಕೇಂದ್ರಗಳ ಸುತ್ತ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

HIJAB

ಇಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರವರೆಗೆ ಪರೀಕ್ಷೆ ನಡೆಯಲಿದೆ. ಮೊನ್ನೆಯ ಪರೀಕ್ಷೆಯಲ್ಲಿ ಕಲಬುರಗಿಯ ಜೇವರ್ಗಿ ತಾಲೂಕಿನ ಇಜೇರಿಯಲ್ಲಿ ಹಿಜಬ್ ಧರಿಸಿಯೇ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿತ್ತು. ಹೀಗಾಗಿ ಶಿಕ್ಷಕನ ವಿರುದ್ಧ ಶ್ರೀರಾಮಸೇನೆ ದೂರು ನೀಡಿದೆ. ಇದನ್ನೂ ಓದಿ: ರಷ್ಯಾ- ಉಕ್ರೇನ್ ಯುದ್ಧದಲ್ಲಿ ಭಾರತದ ನಿಲುವು ಹಗ್ಗದ ಮೇಲೆ ನೃತ್ಯ ಮಾಡಿದಂತಾಗಿದೆ: ಶಶಿ ತರೂರ್

bSSLC 1

ಸರ್ಕಾರಿ ಉರ್ದು ಪ್ರೌಢ ಶಾಲೆಯ ಶಿಕ್ಷಕ ಮಹ್ಮದ್ ಅಲಿಯನ್ನು ಅಮಾನತು ಮಾಡುವಂತೆ ಬಿಇಒಗೆ ಆಗ್ರಹಿಸಿದ್ದಾರೆ. ಇನ್ನು ಗದಗದಲ್ಲಿ ಮೊದಲ ದಿನದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯರು ಹಿಜಬ್ ಧರಿಸಿಯೇ ಪರೀಕ್ಷೆ ಬರೆದಿದ್ದರು. ಸಿ.ಎಸ್ ಪಾಟೀಲ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದ್ದು ಶಾಲಾ ಆಡಳಿತ ಮಂಡಳಿ ಮೌನವಹಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *