ಬೆಂಗಳೂರು: ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ `ನಾ ನಾಯಕಿ’ (Na Nayaki) ಕಾರ್ಯಕ್ರಮಕ್ಕೆ 2 ಸಾವಿರ ರೂ. ಕೊಟ್ಟೇ ಮಹಿಳೆಯರನ್ನು ಕರೆತರಲಾಗಿದೆ ಎಂದು ಬಿಜೆಪಿ (BJP) ಆರೋಪಿಸಿದೆ.
ಸಾವಿರಾರು ನಕ್ಷತ್ರಗಳ ಮಧ್ಯೆ ಒಂದು ಧೃವ ನಕ್ಷತ್ರ!
ಮಹಿಳಾ ಶಕ್ತಿಯ ಸಂಗಮವಾದ ನಾ ನಾಯಕಿ ಸಮಾವೇಶದಲ್ಲಿ ಇಂದು ಶ್ರೀಮತಿ @PriyankaGandhi ಅವರು ಮಾತನಾಡಿದ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ ಪ್ರತೀ ಕುಟುಂಬದ ಒಬ್ಬ ಮಹಿಳೆಗೆ 2000ರೂ. ಸಹಾಯಧನ ಘೋಷಿಸಿದ ಕ್ಷಣಗಳು.#KarnatakaWantsCongress pic.twitter.com/ggjv38ZEN3
— DK Shivakumar (@DKShivakumar) January 16, 2023
Advertisement
ಕಾಂಗ್ರೆಸ್ (Congress) ವಿರುದ್ಧ ಟ್ವೀಟ್‌ನಲ್ಲಿ ಕಾಲೆಳೆದಿರುವ ಬಿಜೆಪಿ, `ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ? `ನಾಯಕಿ’ ಕಾರ್ಯಕ್ರಮಕ್ಕೂ 2,000 ರೂ. ಕೊಟ್ಟೇ ಕರೆತರಲಾಗಿತ್ತು. ಶ್ರೀಮತಿ ಪ್ರಿಯಾಂಕಾ ಗಾಂಧಿ (Priyanka Gandhi) ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ `ಗೃಹಲಕ್ಷ್ಮಿ’ ಯೋಜನೆ ಇರಬೇಕು ಎಂದು ವ್ಯಂಗ್ಯವಾಡಿದೆ. ಇದನ್ನೂ ಓದಿ: ಇಂಗ್ಲಿಷ್ ಪದವೀಧರೆ ಈಗ ಚಾಯ್‌ವಾಲಿ – ಯುವತಿ ಭವಿಷ್ಯದ ಕನಸಿಗೆ ಜನರ ಮೆಚ್ಚುಗೆ
Advertisement
ಅಲ್ಲೇ ಡ್ರಾ ಅಲ್ಲೇ ಬಹುಮಾನ ಅಂದ್ರೆ ಇದೇನಾ?
‘ನಾಯಕಿ’ ಕಾರ್ಯಕ್ರಮಕ್ಕೂ 2000 ರೂ. ಕೊಟ್ಟೇ ಕರೆತರಲಾಗಿತ್ತು! ಶ್ರೀಮತಿ @priyankagandhi ನೇತೃತ್ವದ ಸಮಾವೇಶದಲ್ಲಿ ಹರಿದ ಕಾಂಚಾಣವೇ ಬಹುಶಃ ಕಾಂಗ್ರೆಸ್ಸಿಗರ ಗೃಹಲಕ್ಷ್ಮಿ ಯೋಜನೆ ಇರಬೇಕು. #PriyankaKeFakePromises pic.twitter.com/MCleOTpeKn
— BJP Karnataka (@BJP4Karnataka) January 16, 2023
Advertisement
ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮಹಿಳಾ ಕಾಂಗ್ರೆಸ್‌ನ `ನಾ ನಾಯಕಿ’ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ರಾಜ್ಯ ಕಾಂಗ್ರೆಸ್‌ನ ಮಹಿಳಾ ಪ್ರಣಾಳಿಕೆಯ ಕೆಲವು ಪ್ರಮುಖ ವಿಚಾರಗಳನ್ನು ಘೋಷಣೆ ಮಾಡಿದರು. ಇದೇ ವೇಳೆ `ಗೃಹಲಕ್ಷ್ಮಿ’ ಬಾಂಡ್ ಅನ್ನೂ ಪ್ರದರ್ಶಿಸಿದರು. ಇದಕ್ಕೆ ಸರಣಿ ಟ್ವೀಟ್‌ಗಳ ಮೂಲಕ ಬಿಜೆಪಿ ತಿರುಗೇಟು ನೀಡಿತ್ತು. ಇದನ್ನೂ ಓದಿ: ಭಾರತದೊಂದಿಗೆ 3 ಯುದ್ಧಗಳನ್ನು ಮಾಡಿದ ನಂತರ ಪಾಕಿಸ್ತಾನ ಪಾಠ ಕಲಿತಿದೆ – ಶೆಹಬಾಜ್ ಷರೀಫ್
Advertisement
ನಂತರ `ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯಗಳನ್ನೇ ಪ್ರಶ್ನಿಸದ ಪ್ರಿಯಾಂಕಾ ಗಾಂಧಿ ಅವರು ಈಗ `ಗೃಹಲಕ್ಷ್ಮಿ’ ಯೋಜನೆ ಜಾರಿಗೊಳಿಸುವ ಭರವಸೆ ನೀಡಿರೋದು `ಕಾಂಗ್ರೆಸ್ ಗ್ಯಾರಂಟಿ ಸುಳ್ಳಿನ ಸರಣಿ’ಯ ಮುಂದುವರಿದ ಭಾಗ.
ಇದುವರೆಗೆ ಎಲ್ಲಾ ವರ್ಗಗಳಿಗೂ ಒಗ್ಗುವ ಸಮರ್ಥ ಮಹಿಳಾ ನಾಯಕಿಯರನ್ನು ಹುಟ್ಟು ಹಾಕಲು @INCKarnatakaಗೆ ಸಾಧ್ಯವಾಗಿಲ್ಲ. ಈಗಲೂ ಕುಟುಂಬ ರಾಜಕಾರಣದ ಕುಡಿ @priyankagandhi ಅವರೇ ನಾ ನಾಯಕಿ ಎಂದು ಹೇಳಿಕೊಳ್ಳುತ್ತಿರುವುದು ವಿಪರ್ಯಾಸವಲ್ಲದೇ ಬೇರೇನೂ ಅಲ್ಲ. #PriyankaKeFakePromises pic.twitter.com/YkVqkOnVd0
— BJP Karnataka (@BJP4Karnataka) January 16, 2023
ಛತ್ತೀಸ್‌ಘಡದಲ್ಲಿ ನಿರುದ್ಯೋಗಿ ಯುವತಿಯರಿಗೆ 2,500 ರೂ. ಮಾಸಿಕ ಭತ್ಯೆ ಕೊಡ್ತಿಲ್ಲ, ವಿಧವೆಯರಿಗೆ ಮಾಸಿಕ 1,000 ರೂ. ಪೆನ್ಷನ್ ಕೊಡ್ತಿಲ್ಲ, ಹಿಮಾಚಲ ಪ್ರದೇಶದಲ್ಲಿ 18-60 ವರ್ಷದ ಮಹಿಳೆಯರಿಗೆ 1,500ರೂ. ನೆರವು – ಸಿಕ್ತಿಲ್ಲ. ರಾಜಸ್ಥಾನದಲ್ಲಿ ನಿರುದ್ಯೋಗಿ ಯುವತಿಯರಿಗೆ 3,500 ರೂ. ಮಾಸಿಕ ನಿರುದ್ಯೋಗ ಭತ್ಯೆ, ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ಏಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k