ಹಾವೇರಿ: ಮುಖ್ಯಮಂತ್ರಿಯವರು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಟ್ಟರೆ ನಮ್ಮ ಸಮಾಜದ ಕಾರ್ಯಕ್ರಮಗಳಲ್ಲಿ ಚೆನ್ನಮ್ಮಳ ಫೋಟೋ ಹಾಕಿದಂತೆ ಬೊಮ್ಮಾಯಿಯವರ ಫೋಟೋ ಹಾಕುತ್ತೇವೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
Advertisement
ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಮತ್ತು ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿದ ಅವರು, ನಾವು ಸಾಫ್ಟ್ ಆಗಿಲ್ಲ. ಬಸವರಾಜ ಬೊಮ್ಮಾಯಿಯವರು ನಮಗೆ ನೀಡಿದಷ್ಟು ಸ್ಪಂದನೆಯನ್ನ ಹಿಂದೆ ಯಾರೂ ನೀಡಿಲ್ಲ. ನಿಮ್ಮ ಪಾದಯಾತ್ರೆಯ ಆಶೀರ್ವಾದದಿಂದ ನಾನು ಸಿಎಂ ಆಗಿದ್ದೇನೆ ಅಂತಾ ಬಸವರಾಜ ಬೊಮ್ಮಾಯಿ ಅವರು ಹೇಳಿದರು. ಮತ್ತೇನು ಬೇಕು ಕೇಳಿ ಅಂತಾ ಸಿಎಂ, ಸಚಿವ ಸಿ.ಸಿ.ಪಾಟೀಲರ ಮನೆಗೆ ಬಂದಾಗ ಕೇಳಿದರು ಎಂದು ಸಂತಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಶಿವಾಜಿ ಪ್ರತಿಮೆಗೆ ಮಸಿ – ರಣಧೀರ ಪಡೆಯ 7 ಜನರ ಬಂಧನ
Advertisement
Advertisement
ಆಗ ನಮಗೆ 2ಎ ಮೀಸಲಾತಿ ಕೊಟ್ಟರೆ ಸಾಕು ಸಾವಿರ ಕೋಟಿ ಕೊಟ್ಟಷ್ಟು ಸಮಾಧಾನ ಆಗುತ್ತದೆ ಅಂದೆ. ಬೆಂಗಳೂರಿನಲ್ಲಿ ಅರಮನೆ ಮೈದಾನದಲ್ಲಿ 2ಎ ಮೀಸಲಾತಿ ಹೋರಾಟದ ಸಮಾರಂಭದಲ್ಲಿ ಮಾಡಲು ಸಹಾಯ ಮಾಡಿದರು. ನಮ್ಮ ಹೋರಾಟದ ಹೆಜ್ಜೆ ಹೆಜ್ಜೆಗೂ ಮೀಸಲಾತಿಯ ಹೋರಾಟಕ್ಕೆ ಸಿಎಂ ಸ್ಪಂದನೆ ನೀಡಿದ್ದಾರೆ. ನಮ್ಮ ಸಮಾಜದ ಮುಖಂಡರ ಸಭೆಗೆ ಸ್ವತಃ ಸಿಎಂ ಬಂದು ಮೀಸಲಾತಿ ನೀಡುವ ಬಗ್ಗೆ ಮಾತನಾಡಿದ್ದಾರೆ. ಅತೀ ಶೀಘ್ರದಲ್ಲಿ ಸಮಾಜಕ್ಕೆ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
Advertisement
ಸಿಎಂ ರವರು ಪ್ರೀತಿಯ ಆಮಂತ್ರಣ ಕೊಟ್ಟಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದೇವೆ. 2022ಕ್ಕೆ ಬಸವರಾಜ ಬೊಮ್ಮಾಯಿಯವರು ಹಾಲುಮತ, ವಾಲ್ಮೀಕಿ ಸಮಾಜ, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುತ್ತಾರೆ. ಸಮಾಜಕ್ಕೆ ಮೀಸಲಾತಿ ಕೊಟ್ಟು ಮುಂದೆ ಅವರೆ ಮುಖ್ಯಮಂತ್ರಿ ಆಗುತ್ತಾರೆ. ಮಹಿಳಾ ರೆಜಿಮೆಂಟ್ ಗೆ ತಾಯಿ ಕಿತ್ತೂರು ಚೆನ್ನಮ್ಮಳ ಹೆಸರು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಅಂತಾ ಸಿಎಂಗೆ ಮನವಿ ಮಾಡಿದರು.