ಬೆಂಗಳೂರು: ರಾಜ್ಯದಲ್ಲಿ ಇಂದು 298 ಮಂದಿಯಲ್ಲಿ ಕೊರೊನಾ (Corona Virus) ಪಾಸಿಟಿವ್ ಕಾಣಿಸಿಕೊಂಡಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ.
ಬೆಂಗಳೂರು (Bengaluru) ನಗರದಲ್ಲಿ ಇಬ್ಬರು ಹಾಗೂ ಧಾರವಾಡ ಮತ್ತು ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಕೊರೊನಾ ವೈರಸ್‍ನಿಂದ ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್‍ನಲ್ಲಿ ವರದಿಯಾಗಿದೆ.
Advertisement
Advertisement
ಇಂದು ಒಟ್ಟು 7,791 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 298 ಮಂದಿಯಲ್ಲಿ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಬೆಂಗಳೂರು ನಗರದಲ್ಲಿ 172 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇಂದು 229 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ಕೊಲೆ – 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪಂಜಾಬ್ ಪೊಲೀಸ್
Advertisement
Advertisement
ರಾಜ್ಯದಲ್ಲಿ ಒಟ್ಟು 1,240 ಸಕ್ರೀಯ ಕೇಸ್‍ಗಳಿದ್ದು, 1,168 ಮಂದಿ ಮನೆಯಲ್ಲೇ ಕ್ವಾರಂಟೈನ್ ಆಗಿದ್ದಾರೆ. 72 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 9 ಮಂದಿ ಐಸಿಯುನಲ್ಲಿದ್ದರೆ, ಮೂವರು ಐಸಿಯು ಜೊತೆ ವೆಂಟಿಲೇಟರ್ ಸಪೋರ್ಟ್‍ನಲ್ಲಿದ್ದಾರೆ. ಇನ್ನು 51 ಮಂದಿ ಜನರಲ್ ಬೆಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು ಬಿಟ್ಟರೆ ಹಾಸನದಲ್ಲಿ ಅತಿ ಹೆಚ್ಚು 19 ಸಕ್ರೀಯ ಪ್ರಕರಣ ದಾಖಲಾಗಿವೆ. ಮೈಸೂರು 18, ದಕ್ಷಿಣ ಕನ್ನಡ ಹಾಗೂ ಮಂಡ್ಯದಲ್ಲಿ 11 ಸಕ್ರೀಯ ಪ್ರಕರಣಗಳಿವೆ.