– ಅ.27 ಜೈಶ್ ಪರ ಪೋಸ್ಟರ್ ಶ್ರೀನಗರದಲ್ಲಿ ಪ್ರತ್ಯಕ್ಷ
– ಲೇಡಿ ಡಾಕ್ಟರ್ ಸೇರಿ ಸೇರಿ 8 ಮಂದಿ ಬಂಧನ
ಶ್ರೀನಗರ: ಜೈಶ್ ಎ ಮೊಹಮ್ಮದ್ (JeM) ಹಾಗೂ ಅನ್ಸರ್ ಘಜ್ವತ್-ಉಲ್-ಹಿಂದ್ (AGUH) ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಅಂತಾರಾಷ್ಟ್ರೀಯ ಭಯೋತ್ಪಾದನಾ ಮಾಡ್ಯೂಲ್ ಭೇದಿಸಿರುವ ಜೆ&ಕೆ ಪೊಲೀಸರು (J And K Police) ಈವರೆಗೆ 8 ಮಂದಿ ಉಗ್ರರನ್ನ ಬಂಧಿಸಿದ್ದು, ಸುಮಾರು 2,900 ಕೆಜಿ ಸುಧಾರಿತ ಸ್ಫೋಟಕ ಸಾಧನ ತಯಾರಿಸುವ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ಮುಂದುವರಿಸಿದ ಪೊಲೀಸರು ಇನ್ನಷ್ಟು ರಹಸ್ಯಗಳನ್ನ ಬಯಲಿಗೆಳೆದಿದ್ದಾರೆ.
ಹೌದು. ಕಳೆದ ಅ.27ರಂದು ಶ್ರೀನಗರದಲ್ಲಿ ಜೈಶ್ ಉಗ್ರ ಸಂಘಟನೆಯನ್ನ ಬೆಂಬಲಿಸುವ ಪೋಸ್ಟರ್‌ಗಳು ಕಾಣಿಸಿದ್ದವು. ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ (CCTV footage) ಪರಿಶೀಲಿಸಿದಾಗ ವೈದ್ಯ ಆದಿಲ್ ಅಹ್ಮದ್ ರಾಥರ್ ಪೋಸ್ಟರ್ ಅಂಟಿಸುತ್ತಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು 2 ವಾರಗಳ ಹಿಂದೆಯೇ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಉಗ್ರ ರಾಥರ್‌ನನ್ನ (Rather) ಬಂಧಿಸಿದ್ದರು. 2 ವಾರಗಳಿಂದಲೂ ಸದ್ದಿಲ್ಲದೇ ಕಾರ್ಯಾಚರಣೆ ನಡೆಸುತ್ತಿದ್ದರು. ಇದನ್ನೂ ಓದಿ: ʻವೈಟ್ ಕಾಲರ್ ಉಗ್ರರ ಜಾಲʼದಲ್ಲಿ ವಿದ್ಯಾರ್ಥಿಗಳೂ ಭಾಗಿ – IED ತಯಾರಿಸುವ 2,900 Kg ಸ್ಫೋಟಕ ಪತ್ತೆ, 7 ಉಗ್ರರು ಅರೆಸ್ಟ್!
ರಾಥರ್ ಕಳೆದ ವರ್ಷ ಅಕ್ಟೋಬರ್‌ವರೆಗೂ ಅನಂತ್‌ನಾಗ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಅನಂತನಾಗ್‌ನಲ್ಲಿರುವ ಆತನ ಲಾಕರ್ ಶೋಧಿಸಿದಾಗ ಒಂದು ಅಸಾಲ್ಟ್ ರೈಫಲ್ ಕೂಡ ಪತ್ತೆಯಾಗಿದೆ. ವಿಚಾರಣೆಯ ಸಮಯದಲ್ಲಿ ರಾಥರ್ ಹಂಚಿಕೊಂಡ ಮಾಹಿತಿ ಆಧರಿಸಿ ಮತ್ತೊಬ್ಬ ಉಗ್ರ ಶಕೀಲ್‌ನನ್ನೂ ಬಂಧಿಸಲಾಗಿದೆ. ಶಕೀಲ್ ನೀಡಿದ ಸ್ಫೋಟಕ ಮಾಹಿತಿಗಳನ್ನಾಧರಿಸಿ 2,900 ಕೆಜಿ ಸ್ಫೋಟಕಗಳನ್ನ ಪತ್ತೆಹೆಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ವೈದ್ಯನ ಅರೆಸ್ಟ್ ಬೆನ್ನಲ್ಲೇ ದೆಹಲಿ ಸಮೀಪ 2,900 ಕೆಜಿ ಸ್ಫೋಟಕಗಳು ಪತ್ತೆ
ಉಗ್ರರಿಗೆ ನೆರವು; ಲೇಡಿ ಡಾಕ್ಟರ್ ಬಂಧನ
ಇನ್ನೂ ಪ್ರಮುಖ ಬೆಳವಣಿಗೆಯೊಂದರಲ್ಲಿ ಉಗ್ರರಿಗೆ ನೆರವು ನೀಡಿದ ಆರೋಪದ ಮೇಲೆ ಡಾ. ಮುಜಮ್ಮಿಲ್ ಶಕೀಲ್ ಅವರೊಂದಿಗೆ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯೆಯನ್ನ ಜೆ&ಕೆ ಪೊಲೀಸರು ಬಂಧಿಸಿದ್ದಾರೆ. ಉಗ್ರರು ಅಸಾಲ್ಟ್ ರೈಫಲ್, ಪಿಸ್ತೂಲ್ ಹಾಗೂ ಮದ್ದುಗುಂಡುಗಳನ್ನು ಸಂಗ್ರಹಿಸಲು ಬಳಸಲಾದ ಕಾರು ಮಹಿಳಾ ವೈದ್ಯೆಗೆ ಸೇರಿದ್ದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಮುಜಾಮ್ಮಿಲ್ ಜೊತೆ ಇದ್ದ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ರೈಫಲ್, ಜೀವಂತ ಗುಂಡುಗಳು ಪತ್ತೆಯಾಗಿತ್ತು. ಈ ಬಗ್ಗೆ ಶಕೀಲ್‌ನನ್ನ ಪ್ರಶ್ನಿಸಿದಾಗ ಅದು ತನ್ನ ಸಹೋದ್ಯೋಗಿಯ ಕಾರು ಅನ್ನೋದು ಗೊತ್ತಾಯಿತು. ಅಷ್ಟೇ ಅಲ್ಲ ಆತ ಧೋಜ್‌ನ ಬಾಡಿಗೆ ರೂಮಿನಲ್ಲಿ ಬಚ್ಚಿಟ್ಟಿದ್ದ ಸ್ಫೋಟಕ ವಸ್ತುಗಳು, 20 ಟೈಮರ್, ಇತ್ರ ಅನುಮಾನಾಸ್ಪದ ವಸ್ತುಗಳನ್ನೂ ಪತ್ತೆಹಚ್ಚಲಾಯಿತು.
ಅಲ್ಲದೇ ಶಕೀಲ್ ಕೊಠಡಿ ಮೇಲೆ ದಾಳಿ ನಡೆಸಿದಾಗ, ಸ್ಫೋಟಕ ವಸ್ತುಗಳು ತುಂಬಿದ್ದ 8 ದೊಡ್ಡ ಸೂಟ್‌ಕೇಸ್‌ಗಳು, 4 ಸಣ್ಣ ಸೂಟ್‌ಕೇಸ್‌ಗಳು ಪತ್ತೆಯಾದವು. ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಹರಿಯಾಣ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಎಕೆ -74 ಅಸಾಲ್ಟ್ ರೈಫಲ್, ಮ್ಯಾಗಜೀನ್‌ಗಳು, 83 ಸಜೀವ ಗುಂಡುಗಳು, ಒಂದು ಪಿಸ್ತೂಲ್, 8 ಸಜೀವ ಗುಂಡುಗಳು, 2 ಖಾಲಿ ಕಾರ್ಟ್ರಿಡ್ಜ್ ಮತ್ತು 2 ಹೆಚ್ಚುವರಿ ಮ್ಯಾಗಜೀನ್‌ಗಳು ಪತ್ತೆಯಾಯಿತು. ಇದರಲ್ಲಿ ಮಹಿಳಾ ವೈದ್ಯೆ ಪಾತ್ರ ಕೇಳಿಬಂದ ಬಳಿಕ ಆಕೆಯನ್ನ ವಿಚಾರಣೆಗೆ ಒಳಪಡಿಸಲಾಗಿದೆ.




