ಇಂಫಾಲ್: ಮಣಿಪುರ ಹಿಂಸಾಚಾರದ (Manipur Violence) ತನಿಖೆಗಾಗಿ ಸಿಬಿಐ (CBI) ದೇಶಾದ್ಯಂತ ತನ್ನ ಘಟಕಗಳಿಂದ 29 ಮಹಿಳಾ ಸಿಬ್ಬಂದಿ ಸೇರಿದಂತೆ 53 ಅಧಿಕಾರಿಗಳನ್ನು ನಿಯೋಜಿಸಿದೆ. ಮೂವರು ಡಿಐಜಿಗಳಾದ ಲವ್ಲಿ ಕಟಿಯಾರ್, ನಿರ್ಮಲಾ ದೇವಿ ಮತ್ತು ಮೋಹಿತ್ ಗುಪ್ತಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ರಾಜ್‍ವೀರ್ ಅವರನ್ನು ಒಳಗೊಂಡ ತಂಡವು ಜಂಟಿ ನಿರ್ದೇಶಕ ಘನಶ್ಯಾಮ್ ಉಪಾಧ್ಯಾಯ ಅವರಿಗೆ ವರದಿ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಷ್ಟು ದೊಡ್ಡ ಸಂಖ್ಯೆಯ ಮಹಿಳಾ ಅಧಿಕಾರಿಗಳನ್ನು ಏಕಕಾಲದಲ್ಲಿ ಸೇವೆಗೆ ನಿಯೋಜಿಸಲಾದ ಮೊದಲ ಪ್ರಕರಣ ಇದಾಗಿದೆ. ಅಲ್ಲದೆ 16 ಇನ್ಸ್‌ಪೆಕ್ಟರ್ ಮತ್ತು 10 ಸಬ್‍ಇನ್ಸ್‌ಪೆಕ್ಟರ್ ಸಹ ತಂಡದ ಭಾಗವಾಗಲಿದ್ದಾರೆ. ಪ್ರಕರಣದ ತನಿಖೆಯಲ್ಲಿ ಪಕ್ಷಪಾತದ ಆರೋಪಗಳನ್ನು ತಪ್ಪಿಸಲು ಸ್ಥಳೀಯ ಅಧಿಕಾರಿಗಳ ಪಾತ್ರವನ್ನು ಕಡಿಮೆ ಮಾಡಲಾಗಿದೆ. ಇದನ್ನೂ ಓದಿ: Manipur: ಅಬ್ದುಲ್ ಕಲಾಂರಿಂದ ಗೌರವಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರನ ಪತ್ನಿಯ ಸಜೀವ ದಹನ
ಸಿಬಿಐ ಈಗಾಗಲೇ ಎಂಟು ಪ್ರಕರಣಗಳನ್ನು ದಾಖಲಿಸಿದೆ. ಇದರಲ್ಲಿ ಮೇ 4 ರಂದು ಜನಸಮೂಹದಿಂದ ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಎರಡು ಪ್ರಕರಣಗಳು ಸೇರಿದೆ. ಈ ವೀಡಿಯೋ ಜುಲೈ 16 ರಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ನಂತರ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ಹಿಂಸಾಚಾರಕ್ಕೆ ಸಂಬಂಧಿಸಿದ ಇನ್ನೂ 9 ಪ್ರಕರಣಗಳನ್ನು ತನಿಖೆ ಮಾಡಲು ಸಿಬಿಐ ಸಜ್ಜಾಗಿದೆ. ಇದರಿಂದ ಸಿಬಿಐ ತನಿಖೆ ನಡೆಸುವ ಪ್ರಕರಣಗಳ ಸಂಖ್ಯೆ 17ಕ್ಕೆ ಏರಿಕೆಯಾಗಲಿದೆ. ಆದ್ಯತೆಯ ಮೇರೆಗೆ ತನಿಖೆ ನಡೆಸುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರ ನಡೆದಿದ್ದೇಕೆ?: ಮೀಟೈ ಸಮುದಾಯ ಎಸ್‍ಟಿ ಸ್ಥಾನಮಾನದ ಬೇಡಿಕೆಯ ಕುರಿತು 4 ವಾರಗಳಲ್ಲಿ ಕೇಂದ್ರಕ್ಕೆ ಶಿಫಾರಸನ್ನು ಕಳುಹಿಸುವಂತೆ ಮಣಿಪುರ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿತ್ತು. ನಂತರ ನಾಗಾಗಳು ಮತ್ತು ಕುಕಿಗಳು ಸೇರಿದಂತೆ ಬುಡಕಟ್ಟು ಜನಾಂಗದವರು ಮೆರವಣಿಗೆಯನ್ನು ಆಯೋಜಿಸಿದ್ದರು. ಆಲ್ ಟ್ರೈಬಲ್ ಸ್ಟೂಡೆಂಟ್ ಯೂನಿಯನ್ ಮಣಿಪುರ ಚುರಾಚಂದ್‍ಪುರ ಜಿಲ್ಲೆಯ ಟೋಬರ್ಂಗ್ ಪ್ರದೇಶದಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆಗೆ ಕರೆ ನೀಡಿತ್ತು. ಈ ರ‍್ಯಾಲಿಯಲ್ಲಿ ಸಾವಿರಾರು ಜನರು ಭಾಗವಹಿಸಿದ್ದರು. ಆದರೆ ಈ ಸಂದರ್ಭದಲ್ಲಿ ಆದಿವಾಸಿಗಳು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹಿಂಸಾಚಾರ ಆರಂಭವಾಗಿತ್ತು. ನಂತರ ಇದರಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, ನೂರಾರು ಜನರು ಗಾಯಗೊಂಡಿದ್ದರು. ಇದನ್ನೂ ಓದಿ: Manipur Violence: ಮಣಿಪುರದಲ್ಲಿ 40 ಮಂದಿ ದಂಗೆಕೋರರ ಹತ್ಯೆ – ಇಂಟರ್ನೆಟ್ ಸೇವೆ ಬಂದ್
Web Stories