ನವದೆಹಲಿ: ಕಳೆದ 29 ದಿನದಲ್ಲಿ 30 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 65 ಲಕ್ಷದ ಗಡಿ ದಾಟಿದೆ.
ದೇಶದಲ್ಲಿ ಜನವರಿ 30ರಂದು ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಮುಂದಿನ 218 ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 35 ಲಕ್ಷ ಆಗಿತ್ತು. ಆದ್ರೆ ಕಳೆದ 29 ದಿನಗಳಲ್ಲಿ ಹೊಸ 30 ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗಿವೆ. ಅಂದ್ರೆ ಒಂದು ತಿಂಗಳಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಶೇ.50ರಷ್ಟು ಏರಿಕೆಯಾಗಿದೆ.
Advertisement
Advertisement
ದೇಶದಲ್ಲಿ 6-7 ದಿನಗೊಳಗೆ 5 ಲಕ್ಷ ಮಂದಿಗೆ ಸೋಂಕು ತಗಲುತ್ತಿದೆ. ಕೊರೊನಾ ಕಾಣಿಸಿಕೊಂಡ ಆರಂಭದ ವೇಳೆ 39 ದಿನಗಳಲ್ಲಿ 5 ಲಕ್ಷ ಪ್ರಕರಣಗಳು ವರದಿ ಆಗುತ್ತಿದ್ದವು. ಕಳೆದ 24 ಗಂಟೆಯಲ್ಲಿ 75,829 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 65 ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಯಲ್ಲಿ 940 ಮಂದಿ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಉತ್ತರ ಪ್ರದೇಶ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳಾಗಿವೆ.