– ಇಲಾಖೆಯೇ ನೀಡಿದೆ ಬೆಚ್ಚಿಬಿಳಿಸೋ ಅಂಕಿ ಅಂಶ
ಬೆಂಗಳೂರು: ಲೋಕೋಪಯೋಗಿ ಇಲಾಖೆ ಅತಿ ಹೆಚ್ಚು ಭ್ರಷ್ಟ ಅಧಿಕಾರಿಗಳನ್ನ ಹೊಂದಿರುವ ಇಲಾಖೆ. ಹೀಗಂತ ನಾವ್ ಹೇಳ್ತಿಲ್ಲ. ಸ್ವತಃ ಲೋಕೊಪಯೋಗಿ ಇಲಾಖೆಯ ಬಂದರು, ಒಳನಾಡು ಸಾರಿಗೆ ಸಚಿವರೇ ನೀಡಿರುವ ಅಂಕಿ ಅಂಶ ಹೀಗಂತ ಹೇಳಿದೆ.
ವಿಧಾನ ಪರಿಷತ್ ಸದಸ್ಯ ರಘುನಾಥ್ ರಾವ್ ಮಲ್ಕಾಪೂರೆ ಕೇಳಿದ ಪ್ರಶ್ನೆಗೆ ಚುಕ್ಕೆ ಗುರುತಿಲ್ಲದ ಉತ್ತರ ನೀಡಿರುವ ಸಚಿವ ಹೆಚ್‍ಸಿ ಮಹದೇವಪ್ಪ, 280 ಅಧಿಕಾರಿಗಳು ಕಳೆದ 4 ವರ್ಷಗಳಲ್ಲಿ ಲೋಕಾಯುಕ್ತ ಹಾಗೂ ಇಲಾಖೆ ವಿಚಾರಣೆಗಳನ್ನ ಎದುರಿಸುತ್ತಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.
Advertisement
Advertisement
ಲೋಕಾದಿಂದ 100ಕ್ಕೂ ಹೆಚ್ಚು ಭ್ರಷ್ಟ ಅಧಿಕಾರಿಗಳು ಟ್ರ್ಯಾಪ್: ಒಟ್ಟು 280 ಅಧಿಕಾರಿಗಳ ಪೈಕಿ ಸುಮಾರು 115 ಕ್ಕೂ ಹೆಚ್ಚು ಅಧಿಕಾರಿಗಳು ಭಷ್ಟಾಚಾರದ ಆರೋಪದ ಅಡಿ ಲೋಕಾಯುಕ್ತದಿಂದ ಟ್ರ್ಯಾಪ್ ಆಗಿದ್ದಾರೆ. ಅದೇ ರೀತಿ 100 ಕ್ಕೂ ಹೆಚ್ಚು ಅಧಿಕಾರಿಗಳು ಕಳಪೆ ಕಾಮಗಾರಿ, ಕಾಮಗಾರಿ ಅವ್ಯವಹಾರ, ಅನುದಾನ ದುರ್ಬಳಕೆ ಆರೋಪದಲ್ಲಿ ಇಲಾಖಾ ವಿಚಾರಣೆ ಎದುರಿಸುತ್ತಿದ್ದಾರೆ. ಬಿಬಿಎಂಪಿಯಲ್ಲಿ ಅಕ್ರಮ ಕಾಮಗಾರಿ ಆರೋಪದಲ್ಲಿ 20 ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ 15ಕ್ಕೂ ಹೆಚ್ಚು ಅಧಿಕಾರಿಗಳು ಅಕ್ರಮ ಮರಳು ಮಾಫಿಯಾ ಆರೋಪ ಎದುರಿಸುತ್ತಿದ್ದಾರೆ.