– ಮಹಿಳೆಗೆ ಸ್ಥಳೀಯರಿಂದ ಆತ್ಮಸ್ಥೈರ್ಯ ತುಂಬುವ ಕಾರ್ಯ
ಬೆಂಗಳೂರು: ಕೊರೊನಾ ಗೆದ್ದ ಮಹಿಳೆ 28 ದಿನಗಳ ಬಳಿಕ ತನ್ನ ಹಸುಗೂಸನ್ನು ಅಪ್ಪಿಕೊಂಡು ಮುದ್ದಾಡಿರುವ ಭಾವುಕ ಘಟನೆ ಸಿಲಿಕಾನ್ ಸಿಟಿಯ ದೊಡ್ಡಬಸ್ತಿಯಲ್ಲಿ ನಡೆದಿದೆ.
ದೊಡ್ಡಬಸ್ತಿಯಲ್ಲಿ ರೋಗಿ ನಂಬರ್ 259 ಮಹಿಳೆ ಕೊರೊನಾದಿಂದ ಗುಣಮುಖರಾಗಿ ತನ್ನ ಮನೆಗೆ ವಾಪಸ್ಸಾಗಿದ್ದಾರೆ. ಡೆಲಿವರಿಯಾದ ನಾಲ್ಕೇ ದಿನದಲ್ಲಿ ತನ್ನ ಹಸುಗೂಸಿನಿಂದ ದೂರವಾಗಿದ್ದರು. ಮಗುವಿಗೆ ಎದೆಹಾಲು ಉಣಿಸಲಾಗದಂತಹ ಅಸಹಾಯಕ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ 28 ದಿನಗಳ ಬಳಿಕ, ಈ ಮಹಿಳೆ ಕೊರೊನಾ ಗೆದ್ದು ಮನೆಗೆ ಬಂದಿದ್ದು, ತನ್ನ ಹಸುಗೂಸನ್ನ ಕಂಡು ಭಾವುಕರಾಗಿದ್ದಾರೆ.
Advertisement
Advertisement
ಕೊರೊನಾ ಗೆದ್ದ ಮಹಿಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಗುಣಮುಖವಾಗಿ ಮನೆಗೆ ಬಂದಿದ್ದು, ಖುಷಿಯಾಗುತ್ತಿದೆ. ತುಂಬಾ ದಿನಗಳ ನಂತರ ನನ್ನ ಮಗುವನ್ನು ನೋಡಿದೆ ನನಗೆ ಈಗ ಸಂತೋಷವಾಗುತ್ತಿದೆ ಎಂದು ಭಾವುಕರಾಗಿ ಹೇಳಿದರು. ಕೊರೊನಾ ಗೆದ್ದ ಮಹಿಳೆಗೆ ವಿವಿಧ ಇಲಾಖೆಗಳ ಸ್ಥಳೀಯ ಅಧಿಕಾರಿಗಳು, ಮುಖಂಡರು ಸಾಂತ್ವನ ಮತ್ತು ಧೈರ್ಯ ಹೇಳಿದ್ದಾರೆ.
Advertisement
ಅಷ್ಟೇ ಅಲ್ಲದೇ ಈ ಏರಿಯಾದ ಮುಸ್ಲಿಂ ಬಾಂಧವರು, ವೈದ್ಯಾಧಿಕಾರಿಗಳು, ಅಧಿಕಾರಿಗಳು ಈ ಮಹಿಳೆಯನ್ನ ಚೇರ್ ಮೇಲೆ ಕೂರಿಸಿ ಚಪ್ಪಾಳೆ ಹೊಡೆದು ಆತ್ಮಸ್ಥೈರ್ಯ ತುಂಬಿದರು.
Advertisement
ಮಹಿಳೆಯ ಪತಿ ರೋಗಿ ನಂಬರ್ 199 ಪಾದರಾಯನಪುರದ ನಿವಾಸಿಯಾಗಿದ್ದ. ಮಹಿಳೆ ಹೆರಿಗೆಗಾಗಿ ತವರು ಮನೆ ದೊಡ್ಡಬಸ್ತಿಗೆ ಬಂದಿದ್ದರು. ಆದರೆ ಪತ್ನಿಯನ್ನ ನೋಡಲು ಪತಿ ಬಂದಿದ್ದ. ಅಂದು ಸಂಜೆ ಆತನಿಗೆ ಸೋಂಕು ಇರೋದು ದೃಢವಾಗಿತ್ತು. ಈ ವೇಳೆ ಪತ್ನಿಗೂ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಈ ನಡುವೆ ಮಹಿಳೆಗೆ ಹೆರಿಯಾಗಿತ್ತು. ಆದರೆ ಹೆರಿಗೆಯಾದ ನಾಲ್ಕೇ ದಿನದಲ್ಲಿ ಮಹಿಳೆಗೂ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಮಗು ಮತ್ತು ತಾಯಿಯನ್ನ ಪ್ರತ್ಯೇಕವಾಗಿಡಲಾಗಿತ್ತು.