ಮುಂಬೈ: 28 ವರ್ಷದ ಮಹಿಳೆಯೊಬ್ಬರು ಆಕಸ್ಮಿಕವಾಗಿ 5.2 ಸೆಂಟಿಮೀಟರ್ ಉದ್ದದ ಪಿನ್ ನುಂಗಿದ್ದು, ಇದೀಗ ವೈದ್ಯರು ಅದನ್ನು ಹೊರತೆಗೆಯುವ ಮೂಲಕ ಮಹಿಳೆಯನ್ನು ರಕ್ಷಿಸಿದ್ದಾರೆ.
ದುಪಟ್ಟ(ವೇಲ್) ಕಟ್ಟಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪಿನ್ ಅಥವಾ ಗುಂಡು ಸೂಜಿಯನ್ನು ಮಹಿಳೆ ಬಾಯಿಯಲ್ಲಿ ಇಟ್ಟುಕೊಂಡಿದ್ದರು. ಇದು ಬಾಯೊಳಗೆ ಹೋಗಿ ಸಣ್ಣ ಕರುಳಿನಲ್ಲಿ ಸಿಲುಕಿಕೊಂಡಿದೆ.
Advertisement
Advertisement
ಪಿನ್ ನುಂಗಿದ ತಕ್ಷಣ ಆಕೆಗೆ ಯಾವುದೇ ನೋವಿನ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆದ್ರೆ 6 ಗಂಟೆಯ ಬಳಿಕ ಮಹಿಳೆಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಕೊಂಡೊಯ್ಯಲಾಗಿದೆ.
Advertisement
Advertisement
ವೈದ್ಯರಾದ ಡಾ. ಚೋಕ್ಸಿ ಮಹಿಳೆ ನುಂಗಿದ್ದ ಪಿನ್ ಹೊರತೆಗೆಯಲು ಅಪ್ಪರ್ ಗ್ಯಾಸ್ಟ್ರೋ ಇಂಟಸ್ಟೈನಲ್ ಎಂಡೋಸ್ಕೋಪಿ(ಮೇಲಿನ ಜೀಣಾಂಗವ್ಯೂಹದ ಎಂಡೋಸ್ಕೋಪಿ) ಮಾಡಿದ್ದರು. ಒಂದು ವೇಳೆ ಪಿನ್ ನೈಸರ್ಗಿಕವಾಗಿ ಹೊರಬರಲಿ ಎಂದು ಕಾದಿದ್ದರೆ ಕರುಳಿನಲ್ಲಿ ರಂಧ್ರ ಉಂಟಾಗಿ ತೊಂದರೆಯಾಗುವ ಸಂಭವವಿತ್ತು.
ಎಂಡೋಸ್ಕೋಪಿ ಮಾಡಿದಾಗ ಮಹಿಳೆ ನುಂಗಿದ್ದ ಪಿನ್ ಮತ್ತಷ್ಟು ಆಳಕ್ಕೆ ಹೋಗಿರುವುದು ತಿಳಿಯಿತು. ಹೀಗಾಗಿ ಸಿಂಗಲ್ ಬಲೂನ್ ಎಂಟೆರೋಸ್ಕೋಪ್ ಎಂಬ ಆಧುನಿಕ ಹಾಗೂ ವಿಶೇಷ ಸಾಧನದ ಮೂಲಕ ವೈದ್ಯರು ಪಿನ್ ಹೊರತೆಗೆದಿದ್ದಾರೆ.
ಇದೀಗ ಮಹಿಳೆ ಆರೋಗ್ಯವಾಗಿದ್ದು, ಆಹಾರ ಸೇವಿಸುತ್ತಿದ್ದಾರೆ ಅಂತಾ ವೈದ್ಯರು ಹೇಳಿದ್ದಾರೆ.