ಗಾಂಧಿನಗರ: 28 ವರ್ಷದ ಪದವೀಧರೆಯೊಬ್ಬರು ಜೈನ ಧರ್ಮ ದೀಕ್ಷೆ ತೆಗೆದುಕೊಳ್ಳುವ ಮೊದಲು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಗುಜರಾತಿನ ಶೆಫಾಲಿ ಕುಮಾರಿ ಸನ್ಯಾಸಿನಿಯಾಗಿ ದೀಕ್ಷೆ ಪಡೆಯುವ ಮುನ್ನ ಫೋಟೋ ಶೂಟ್ ಮಾಡಿಸಿದ್ದು, ಈಗ ಈ ಫೋಟೋಗಳು ವೈರಲ್ ಆಗಿದೆ. ಪ್ರಪಂಚ ನನಗೆ ಸಂತೋಷವನ್ನು ಕೊಟ್ಟಿದೆ. ಹೀಗಾಗಿ ನಾನು ಸನ್ಯಾಸಿನಿ ದೀಕ್ಷೆಯನ್ನು ಪಡೆಯುವ ನಿರ್ಧಾರ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
Advertisement
ಶೆಫಾಲಿ ತನ್ನ 15 ನೇ ವಯಸ್ಸಿನಲ್ಲಿ ತನ್ನ ತಂದೆಯನ್ನು ಕಳೆದುಕೊಂಡಿದ್ದರು. ನಂತರ ತನ್ನ ತಾಯಿ ಮತ್ತು ಸಹೋದರನಿಂದ ದೂರ ಇದ್ದು ವಿದ್ಯಾಭ್ಯಾಸ ಮಾಡುತ್ತಿದ್ದರು. ಶೆಫಾಲಿ ಅವರಿಗೆ ಈಗ 28 ವರ್ಷ ವಯಸ್ಸಾಗಿದ್ದು ಮಹೇಶ್‍ನಗರದಲ್ಲಿ ನಡೆಯುತ್ತಿದ್ದ ವಸಂತ್ ಪಂಚಮಿ ಕಾರ್ಯಕ್ರಮದಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ.
Advertisement
ಶೆಫಾಲಿಯ ತಂದೆ ವಸಂತ್ ಕುಮಾರ್ ಫೂಲ್ಚಂದ್ ಶ್ರಾಫ್ 2003 ರಲ್ಲಿ ನಿಧನರಾಗಿದ್ದರು. ತಾಯಿ ಮತ್ತು ಸಹೋದರ ಭೌಮಿಕ್ ಅವರು ಶೆಫಾಲಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿದ್ದು, ಶೆಫಾಲಿ ಕುಟುಂಬ ಮತ್ತು ಸಂವಹನ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ.
Advertisement
ಗುರುವಾರ ವಸಂತ್ ಪಂಚಮಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಜನವರಿ 21 ರಂದು ದೀಕ್ಷಾರ್ಥಿ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲ್ಪಟ್ಟಿದ್ದು, ಜನವರಿ 23 ರಂದು ಸಂಜೆ ಸುಮಾರು 6:30 ಅಧಿಕೃತವಾಗಿ ನಿಜಾಂಪುರಾ ಜೈನ್ ಯೂನಿಯನ್ ಶೆಫಾಲಿ ಅವರಿಗೆ ಸನ್ಯಾಸತ್ವ ನೀಡಿದೆ.
Advertisement
ಜೈನ ಸಮುದಾಯದ 100 ಕ್ಕೂ ಅಧಿಕ ಮಂದಿ ಸದಸ್ಯರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಶೆಫಾಲಿ ಅವರ ಈ ನಿರ್ಧಾರಕ್ಕೆ ಅವರ ಸಹೋದರ ಕೂಡ ಬೆಂಬಲ ನೀಡಿದ್ದು ಈ ಕಾರ್ಯಕ್ರಮಕ್ಕೆ ವಿದೇಶದಿಂದ ಆಗಮಿಸಿದ್ದರು.