ಬೆಂಗಳೂರು: ಫ್ಯಾಮಿಲಿ ಬಾರ್ ಅಂಡ್ ರೆಸ್ಟೋರೆಂಟ್ ಎಂದು ಹೆಸರಿಟ್ಟುಕೊಂಡು ಅನಾಚಾರವನ್ನೇ ಬಂಡವಾಳ ಮಾಡಿಕೊಂಡಿದ್ದ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಸಿಸಿಬಿ ದಾಳಿ ನಡೆಸಿದೆ.
ರಾಜಧಾನಿಯ ಹೃದಯ ಭಾಗ ಮೆಜೆಸ್ಟಿಕ್‍ನಲ್ಲಿರುವ ಪೋರ್ಟ್ ಆಫ್ ಪೆವಿಲಿಯನ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೆ ಭಾನುವಾರ ತಡರಾತ್ರಿ ಸಿಸಿಬಿ ಎಸಿಪಿ ಸುಬ್ರಮಣ್ಯ ಅಂಡ್ ಟೀಂ ದಿಢೀರ್ ದಾಳಿ ಮಾಡಿದ್ದಾರೆ. ಕಲರ್ ದುನಿಯಾದ ಆಸೆಗೆ ಬಿದ್ದು ಬಾರ್ ಮಾಲೀಕರ ಅಧೀನದಲ್ಲಿದ್ದ ಬೇರೆ ರಾಜ್ಯದ 28 ಯುವತಿಯರನ್ನ ರಕ್ಷಣೆ ಮಾಡಿದ್ದಾರೆ.
Advertisement
ಪೋರ್ಟ್ ಆಫ್ ಪೆವಿಲಿಯನ್ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ಡಿಸ್ಕೋಥೆಕ್ ಪರವಾನಗಿಯನ್ನು ಪಡೆದುಕೊಂಡಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿರುವ ಯುವತಿಯರನ್ನು ಗಿರಾಕಿಗಳ ಜೊತೆ ಕಪಲ್‍ಗಳ ರೀತಿಯಲ್ಲಿ ಕಳುಹಿಸಿಕೊಡುತ್ತಿದ್ದರು. ಯುವತಿಯರ ಬಳಿ ಗಿರಾಕಿಗಳ ಮುಂದೆ ಅಶ್ಲೀಲವಾಗಿ ನೃತ್ಯ ಮಾಡಿಸುತ್ತಿದ್ದರು.
Advertisement
Advertisement
ಭಾನುವಾರ ರಾತ್ರಿ ವೀಕೆಂಡ್ ಆಗಿರುವ ಕಾರಣ ಸಾಕಷ್ಟು ಯುವತಿಯರನ್ನು ಇಟ್ಟುಕೊಂಡು ಅಶ್ಲೀಲ ನೃತ್ಯ ಮಾಡಿಸುವಾಗ ಸಿಸಿಬಿ ದಾಳಿ ಮಾಡಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್ ಮ್ಯಾನೇಜರ್ ಸುದೇಶ್ ಸೇರಿ ಒಟ್ಟು 80 ಮಂದಿಯನ್ನು ಬಂಧಿಸಿದ್ದಾರೆ. ಬಾರ್ ಮಾಲೀಕನ ಬಗ್ಗೆ ಈಗಾಗೇ ಮಾಹಿತಿ ಕಲೆ ಹಾಕುತ್ತಿರುವ ಸಿಸಿಬಿ ಬಾರ್ ಮಾಲೀಕರನ್ನು ವಶಕ್ಕೆ ಪಡೆದು ತನಿಖೆ ಮಾಡುವ ಸಾಧ್ಯತೆಗಳಿದೆ.
Advertisement
ಸದ್ಯ ಆರೋಪಿಗಳೆಲ್ಲರನ್ನು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದು ತನಿಖೆ ಮಾಡುತ್ತಿದ್ದಾರೆ. ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ದಕ್ಷಿಣ ಕನ್ನಡದವಾಗಿದ್ದು ಮಾಲೀಕನ ಹುಡುಕಾಟ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv