ಕೀವ್: ಉಕ್ರೇನ್ ಮೇಲೆ ರಷ್ಯಾ ದಾಳಿ ಆರಂಭಿಸಿದಾಗಲಿಂದಲೂ ಇದುವರೆಗೂ 28 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು 840 ಮಕ್ಕಳು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.
Advertisement
ಮಾಧ್ಯಮವೊಂದರಲ್ಲಿ ಮಾತನಾಡಿದ ಉಕ್ರೇನ್‍ನ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥ ಒಲೆಕ್ಸಿ ಡ್ಯಾನಿಲೋವ್ ಅವರು, ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಮತ್ತು ಮಕ್ಕಳಿಗೆ ಅವಕಾಶ ಮಾಡಿಕೊಡುವಂತೆ ರಷ್ಯಾಕ್ಕೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಾನವೀಯತೆ ಎಲ್ಲದ್ದಕ್ಕಿಂತ ಮುಖ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ: ಎಂಇಎ
Advertisement
Advertisement
ರಷ್ಯಾ ಉಕ್ರೇನ್ ಮೇಲೆ ಫೆಬ್ರವರಿ 24 ರಂದು ದಾಳಿ ನಡೆಸಲು ಆರಂಭಿಸಿತು. ಅಂದಿನಿಂದ ದೇಶಾದ್ಯಂತ ಮುಷ್ಕರಗಳು ಪ್ರಾರಂಭಗೊಂಡಿತು. ರಷ್ಯಾ ಆಕ್ರಮಣದಿಂದ ಉಕ್ರೇನ್‍ನಲ್ಲಿ ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಒಂದು ದಶಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಈ ವಾರಾಂತ್ಯದಲ್ಲಿ ಉಕ್ರೇನಿಯನ್ ಮತ್ತು ರಷ್ಯಾದ ನಿಯೋಗಗಳು ಮೂರನೇ ಸುತ್ತಿನ ಮಾತುಕತೆ ನಡೆಸಲು ಯೋಜಿಸಿದೆ. ಇದನ್ನೂ ಓದಿ: ಕದನ ವಿರಾಮ ಘೋಷಿಸಿ: ರಷ್ಯಾ, ಉಕ್ರೇನ್‌ಗೆ ಭಾರತ ಮನವಿ
Advertisement