ವಾಷಿಂಗ್ಟನ್: ಅಪರಾಧವೇ ಮಾಡದ ವ್ಯಕ್ತಿಯೊಬ್ಬನು 28 ವರ್ಷಗಳ ಕಾಲ ಜೈಲುವಾಸ ಅನುಭವಿಸಿದ್ದಾನೆ. ಅಲ್ಲದೆ ಇದೀಗ ಜೈಲಿನಿಂದ ಹೊರ ಬರುತ್ತಿದ್ದಂತೆ ಕೋಟ್ಯಧಿಪತಿಯಾಗಿರುವ ವಿಚಿತ್ರ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.
ಚೆಸ್ಟರ್ ಹಾಲ್ಮನ್, 28 ವರ್ಷಗಳ ಕಾಲ ಜೈಲುವಾಸ ಅನುಭವಿಸಿರುವ ವ್ಯಕ್ತಿ. ಈತ ಅಮೆರಿಕದ ಫಿಲಿಡೆಲ್ಫಿಯಾದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದನು. 28 ವರ್ಷಗಳ ನಂತರ ಕೊಲೆಯ ಪ್ರಕರಣದ ನಿಜಾಂಶ ತಿಳಿದಿದೆ.
ಚೆಸ್ಟರ್ ಅಪರಾಧಿಯಲ್ಲ ಎನ್ನುವುದು ಸಾಬೀತು ಆದಮೇಲೆ ಸುಳ್ಳು ಸಾಕ್ಷಿ ಹೇಳಿ ಅಪರಾಧಿಯನ್ನಾಗಿ ಮಾಡಿರುವುದು ತಿಳಿದಿದೆ. ಚೆಸ್ಟರ್ ಪ್ರಕರಣದಲ್ಲಿ ಸರ್ಕಾರ ತಪ್ಪಾಗಿ ವಿಚಾರಣೆ ಮಾಡಿದೆ. ಈ ಕಾರಣದಿಂದಾಗಿ 71.6 ಕೋಟಿ ರೂಪಾಯಿ ಪರಿಹಾರ ಹಣವನ್ನು ಆತನಿಗೆ ನೀಡಿ ಎಂದು ಅಲ್ಲಿನ ಮೇಯರ್ ಆದೇಶ ಹೊರಡಿಸಿದ್ದಾರೆ. ಒಟ್ಟಿನಲ್ಲಿ ಸದ್ಯ 28 ವರ್ಷ ಜೈಲುವಾಸ ಅನುಭವಿಸಿರುವ ಚೆಸ್ಟರ್ ಇದೀಗ ಕೋಟಿಗಳ ಒಡೆಯನಾಗಿದ್ದಾನೆ.