– ಆರನೇ ವಿಕೆಟ್‍ಗೆ ಮುರಿಯದ 78 ರನ್‍ಗಳ ಜೊತೆಯಾಟ
ದುಬೈ: ಇಂದು ನಡೆದ 26ನೇ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 5 ವಿಕೆಟ್‍ಗಳ ರೋಚಕ ಜಯಗಳಿಸಿದೆ.
ದುಬೈ ಸ್ಟೇಡಿಯಂನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ಮನೀಷ್ ಪಾಂಡೆ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರಿನಲ್ಲಿ 158 ರನ್ ಸಿಡಿಸಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡ ಆರಂಭದಲ್ಲೇ ಮೂರು ವಿಕೆಟ್ ಕಳೆದುಕೊಂಡರೂ ಕೊನೆಯಲ್ಲಿ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಅವರ ಭರ್ಜರಿ ಬ್ಯಾಟಿಂಗ್‍ನಿಂದ 19.5 ಓವರ್ ಗೆ ತನ್ನ ಗುರಿಯನ್ನು ಮುಟ್ಟಿ ಜಯಗಳಿಸಿದೆ.
Advertisement
What a way to win the game. A MAXIMUM by Riyan Parag as @rajasthanroyals beat #SRH by 5 wickets.
This has been absolutely phenomenal by Tewatia and Parag.#Dream11IPL pic.twitter.com/vchiPNAPWJ
— IndianPremierLeague (@IPL) October 11, 2020
Advertisement
ಪರಾಗ್, ತೆವಾಟಿಯಾ ಸ್ಫೋಟಕ ಆಟ
12ನೇ ಓವರ್ ಮುಕ್ತಾಯಕ್ಕೆ ರಾಜಸ್ಥಾನ್ ತಂಡ 85 ರನ್ ಗಳಿಸಿ ತಂಡ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಒಂದಾದ ರಿಯಾನ್ ಪರಾಗ್ ಮತ್ತು ರಾಹುಲ್ ತೆವಾಟಿಯಾ ಭರ್ಜರಿಯಾಗಿ ಬ್ಯಾಟ್ ಬೀಸಿದರು. ಆರನೇ ವಿಕೆಟ್‍ಗೆ ಈ ಜೋಡಿ ಬರೋಬ್ಬರಿ 78 ರನ್‍ಗಳ ಜೊತೆಯಾಟವಾಡಿತು. ಸ್ಫೋಟಕವಾಗಿ ಆಟವಾಡಿದ ತೆವಾಟಿಯಾ 28 ಬಾಲಿಗೆ ಎರಡು ಸಿಕ್ಸರ್ ಮತ್ತು ನಾಲ್ಕು ಫೋರ್ ಸಮೇತ 45 ರನ್ ಸೇರಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಪರಾಗ್ 26 ಎಸೆತದಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ಸಮೇತ 42 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
Advertisement
These two have been in sublime touch. Will they get their team home?#SRHvRR pic.twitter.com/AORgfDiJ8l
— IndianPremierLeague (@IPL) October 11, 2020
Advertisement
ಇಂದು ರಾಜಸ್ಥಾನ್ ರಾಯಲ್ಸ್ ತಂಡ ಆರಂಭಿಕ ಜೋಡಿಯಲ್ಲಿ ಬದಲಾವಣೆ ಮಾಡಿತ್ತು. ಇಂದು ತನ್ನ ಮೊದಲ ಪಂದ್ಯದಲ್ಲೇ ಜೋಸ್ ಬಟ್ಲರ್ ಅವರ ಜೊತೆ ಬೆನ್ ಸ್ಟೋಕ್ಸ್ ಅವರು ಓಪನರ್ ಆಗಿ ಬಂದಿದ್ದರು. ಆದರೆ ಸ್ಟೋಕ್ಸ್ ಅವರಿಗೆ ಆಘಾತ ನೀಡಿದ ಖಲೀಲ್ ಅಹ್ಮದ್ ಅವರು ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ನಂತರ ಬಂದ ನಾಯಕ ಸ್ಟೀವ್ ಸ್ಮಿತ್ ಅವರು ಐದು ರನ್ ಗಳಿಸಿ ಇಲ್ಲದ ರನ್ ಕದಿಯಲು ಹೋಗಿ ರನೌಟ್ ಆದರು.
Rashid Khan, you beauty!
Picks up another wicket and this time it is Samson who has to depart.#RR 5 down with 78 runs on the board.#Dream11IPL pic.twitter.com/ZiKiJzmgBn
— IndianPremierLeague (@IPL) October 11, 2020
4ನೇ ಓವರ್ ಮೊದಲ ಬಾಲಿನಲ್ಲೇ 13 ಬಾಲಿಗೆ 16 ರನ್ ಹೊಡೆದು ಆಡುತ್ತಿದ್ದ ಜೋಸ್ ಬಟ್ಲರ್ ಅವರು ಕೀಪರ್ ಕ್ಯಾಚ್ ನೀಡಿ ಖಲೀಲ್ ಅಹ್ಮದ್ ಅವರಿಗೆ ವಿಕೆಟ್ ಒಪ್ಪಿಸಿದರು. ಪರಿಣಾಮ ರಾಜಸ್ಥಾನ್ ತಂಡ ಪವರ್ ಪ್ಲೇ ಮುಕ್ತಾಯಕ್ಕೆ ಮೂರು ವಿಕೆಟ್ ಕಳೆದುಕೊಂಡು 36 ರನ್ ಸೇರಿಸಿತು. ನಂತರ 9ನೇ ಓವರಿನಲ್ಲಿ 15 ಬಾಲಿಗೆ 18 ರನ್ ಗಳಿಸಿ ಆಡುತ್ತಿದ್ದ ರಾಬಿನ್ ಉತ್ತಪ್ಪ ಅವರು ರಶೀದ್ ಖಾನ್ ಅವರಿಗೆ ಕ್ಲೀನ್ ಬೌಲ್ಡ್ ಆದರು.
Two big wickets for Khaleel Ahmed as #RR are 36/3 at the end of the powerplay.
Live – https://t.co/uaylR8mH7g #Dream11IPL pic.twitter.com/eLfIh6mCms
— IndianPremierLeague (@IPL) October 11, 2020
25 ಬಾಲಿಗೆ 26 ರನ್‍ಗಳಿಸಿ ತಾಳ್ಮೆಯ ಆಟವಾಡುತ್ತಿದ್ದ ಸಂಜು ಸ್ಯಾಮ್ಸನ್ ಅವರು 11ನೇ ಓವರಿನ ಕೊನೆ ಬಾಲಿನಲ್ಲಿ ರಶೀದ್ ಖಾನ್ ಅವರು ಬೌಲಿಂಗ್ ಮೋಡಿಗೆ ಬಲಿಯಾದರು. ನಂತರ ಒಂದಾಗಿ ಭರ್ಜರಿ ಜೊತೆಯಾವಾಡಿದ ಪರಾಗ್ ಹಾಗೂ ತೆವಾಟಿಯಾ ರಾಜಸ್ಥಾನ್ ತಂಡವನ್ನು ಗೆಲುವಿನ ದಡ ಸೇರಿಸಿದರು.