ಬೆಂಗಳೂರು: ನಗರದ ವಿವಿಧೆಡೆ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನು (Bangla Immigrants) ಗುರುತಿಸಿ ಗಡಿಪಾರು ಮಾಡುವ ಕಾರ್ಯಾಚರಣೆ ತೀವ್ರಗೊಂಡಿದೆ. ಇದುವರೆಗೆ ಬೆಂಗಳೂರಿನಿಂದ (Bengaluru) 272 ಅಕ್ರಮ ಬಾಂಗ್ಲಾ ವಲಸಿಗರನ್ನ ಗಡಿಪಾರು ಮಾಡಲಾಗಿದೆ.
ಈ ಪೈಕಿ 178 ಪುರುಷರು, 94 ಮಹಿಳೆಯರು ಮತ್ತು 12 ಮಕ್ಕಳು ಸೇರಿದ್ದಾರೆ. ಎಲ್ಲರನ್ನು ಪೊಲೀಸರು (Bengaluru CCB Police) ಪತ್ತೆ ಮಾಡಿ ಒಟ್ಟಿಗೆ ಗಡಿಪಾರು ಮಾಡಿದ್ದಾರೆ. ಜೊತೆಗೆ ಸಿಸಿಬಿ ಪೊಲೀಸರು (CCB Police) ಬಾಂಗ್ಲಾ ವಲಸಿಗರನ್ನ ಕರೆತರುತಿದ್ದವರ ಮೂಲಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ: ಲವ್ ಜಿಹಾದ್ ಕೇಸಲ್ಲಿ ಜಿಮ್ ಟ್ರೈನರ್‌ಗೆ ಸಂಕಷ್ಟ – ಲೈಂಗಿಕ ದೌರ್ಜನ್ಯ ಕೇಸ್ ದಾಖಲಿಸಿದ ಸಂತ್ರಸ್ತೆ

ಸಿಸಿಬಿ ಪೊಲೀಸರು ಇಡೀ ಬೆಂಗಳೂರಿನಾದ್ಯಂತ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ವಿಶೇಷ ಕಾರ್ಯಾಚರಣೆ ಶುರು ಮಾಡಿದ್ದಾರೆ. ಸದ್ಯ ಗುರುತಿಸಲಾದ ಅಕ್ರಮ ವಲಸಿಗರನ್ನು ತಮ್ಮ ದೇಶಕ್ಕೆ ಬಿಡುವ ಕೆಲಸ ಮುಂದುವರಿಸಿದ್ದಾರೆ. ತ್ರಿಪುರಗಡಿಯಿಂದ ಬಿಎಸ್‌ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಮೂಲಕ ಇವರನ್ನು ಗಡಿಪಾರು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ ಎಲೆಕ್ಷನ್ ಹಿನ್ನೆಲೆ ತ್ರಿಪುರಾ ಗಡಿಯಿಂದ ಗಡಿಪಾರು ಮಾಡಲಾಗುತ್ತಿದೆ. ಇದನ್ನೂ ಓದಿ: ಸರ್ಕಾರಿ ಬಸ್‌ಗೆ ಗುದ್ದಿದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಎಸ್ಕಾರ್ಟ್ ವಾಹನ; ಕೇಸ್ ದಾಖಲು
ಅಕ್ರಮವಾಗಿ ಭಾರತ ಪ್ರವೇಶಿಸುತ್ತಿದ್ದದ್ದು ಹೇಗೆ?
ಅಕ್ರಮ ಬಾಂಗ್ಲಾ ವಲಸಿಗರು ಮೂವರು ಟೇಕೆದಾರರ ಮೂಲಕ ಭಾರತದ ಗಡಿಯೊಳಗೆ ಪ್ರವೇಶಿಸುತ್ತಿದ್ದರಂತೆ. ಓರ್ವ ಟೇಕೆದಾರ ಭಾರತದ ಗಡಿಯವರೆಗೂ ಅವರನ್ನ ಕರೆತರುತ್ತಿದ್ದನಂತೆ. ಮತ್ತೋರ್ವ ಭಾರತದ ಗಡಿ ದಾಟಿಸಿ, ಒಳಗೆ ಕರೆಸಿಕೊಳ್ಳುತ್ತಿದ್ದನಂತೆ, 3ನೇ ಟೇಕೆದಾರ್ ಭಾರತದಲ್ಲಿರುವ ಕೆಲಸದ ಬಗ್ಗೆ ಮಾಹಿತಿ ನೀಡಿ, ಅಕ್ರಮ ವಲಸಿಗರಿಗೆ ಕೆಲಸ ಹುಡುಕಿಕೊಡುತ್ತಿದ್ದನಂತೆ. ಈ ಟೇಕೆದಾರ್‌ಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು, ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರನ್ನ ಪತ್ತೆಹಚ್ಚಿ ಗಡಿಪಾರಿಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮದ್ವೆಗೆ ಹೆಣ್ಣು ಸಿಗಲಿಲ್ಲ ಅಂತ 26 ವರ್ಷದ ಯುವಕ ಆತ್ಮಹತ್ಯೆ

