ಬೆಂಗಳೂರು: ರಾಜ್ಯದಲ್ಲಿ ನಿನ್ನೆಗಿಂತ ಇಂದು ಅಲ್ಪ ಪ್ರಮಾಣದಲ್ಲಿ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಇಳಿಕೆ ಕಂಡಿದೆ. ನಿನ್ನೆ ಒಟ್ಟು 34,047 ಪ್ರಕರಣ ದಾಖಲಾಗಿದ್ದರೆ, ಇಂದು ಒಟ್ಟು 27,156 ಕೇಸ್ ಪತ್ತೆಯಾಗಿದೆ.
Advertisement
ಇಂದು ಮರಣ ಪ್ರಕರಣ ಏರಿಕೆ ಕಂಡಿದ್ದು, ಒಟ್ಟು 14 ಮರಣ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಒಟ್ಟು 15,947 ಹೊಸ ಕೇಸ್ ಮತ್ತು 5 ಮರಣ ಪ್ರಕರಣ ದಾಖಲಾಗಿದೆ. ಪಾಸಿಟಿವಿಟಿ ರೇಟ್ ನಿನ್ನೆ 19.29% ರಷ್ಟಿದ್ದರೆ, ಇಂದು 12.45%ಕ್ಕೆ ಇಳಿಕೆ ಕಂಡಿದೆ. ರಾಜ್ಯದಲ್ಲಿ ಒಟ್ಟು 2,17,297 ಸಕ್ರಿಯ ಪ್ರಕರಣಗಳು ದಾಖಲಾದರೆ, ಬೆಂಗಳೂರಿನಲ್ಲಿ 1,58,000 ಸಕ್ರಿಯ ಪ್ರಕರಣವಿದೆ. ಒಟ್ಟು 7,827 ಮಂದಿ ವಿವಿಧ ಆಸ್ಪತ್ರೆಗಳಿಂದ ಇಂದು ಬಿಡುಗಡೆಗೊಂಡಿದ್ದು, ಇಂದು 2,17,998 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಕೊರೊನಾ ನೆಗೆಟಿವ್
Advertisement
Advertisement
Test positivity rate drops significantly to 12.45% as new cases dip:
◾New cases in State: 27,156
◾New cases in B'lore: 15,947
◾Positivity rate in State: 12.45%
◾Discharges: 7,827
◾Active cases State: 2,17,297 (B'lore- 158k)
◾Deaths:14 (B'lore- 05)
◾Tests: 2,17,998
— Dr Sudhakar K (@mla_sudhakar) January 17, 2022
Advertisement
ರಾಜ್ಯದಲ್ಲಿ ಇಂದು ಒಟ್ಟು 2,16,816 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 2,17,998 ಸ್ಯಾಂಪಲ್ (ಆರ್‌ಟಿಪಿಸಿಆರ್ 1,81,136 + 36,862 ರ್‍ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಜನವರಿ 31ರ ವರೆಗೆ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 82, ಬಳ್ಳಾರಿ 560, ಬೆಳಗಾವಿ 294, ಬೆಂಗಳೂರು ಗ್ರಾಮಾಂತರ 538, ಬೆಂಗಳೂರು ನಗರ 15,947, ಬೀದರ್ 75, ಚಾಮರಾಜನಗರ 101, ಚಿಕ್ಕಬಳ್ಳಾಪುರ 209, ಚಿಕ್ಕಮಗಳೂರು 236, ಚಿತ್ರದುರ್ಗ 178, ದಕ್ಷಿಣ ಕನ್ನಡ 490, ದಾವಣಗೆರೆ 121, ಧಾರವಾಡ 784, ಗದಗ 71, ಹಾಸನ 1,050, ಹಾವೇರಿ 27, ಕಲಬುರಗಿ 463, ಕೊಡಗು 137, ಕೋಲಾರ 463, ಕೊಪ್ಪಳ 89, ಮಂಡ್ಯ 917, ಮೈಸೂರು 1,770, ರಾಯಚೂರು 140, ರಾಮನಗರ 96, ಶಿವಮೊಗ್ಗ 364, ತುಮಕೂರು 1,147, ಉಡುಪಿ 442, ಉತ್ತರ ಕನ್ನಡ 203, ವಿಜಯಪುರ 128 ಮತ್ತು ಯಾದಗಿರಿಯಲ್ಲಿ 18 ಪಾಸಿಟಿವ್ ಪ್ರಕರಣ ದಾಖಲಾಗಿದೆ.