ಜೈಪುರ: ಪವರ್-ಲಿಫ್ಟರ್ ಅಭ್ಯಾಸದ ವೇಳೆ 270 ಕೆಜಿ ರಾಡ್ ಕುತ್ತಿಗೆಗೆ ಬಿದ್ದು ರಾಜಸ್ಥಾನದ ಚಿನ್ನದ ಪದಕ ವಿಜೇತ ಕ್ರೀಡಾಪಟುವೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ರಾಜಸ್ಥಾನದ ಬಿಕಾನೇರ್ ಜಿಲ್ಲೆಯಲ್ಲಿ ಜೂನಿಯರ್ ರಾಷ್ಟ್ರೀಯ ಕ್ರೀಡಾಕೂಟದ ಚಿನ್ನದ ಪದಕ ವಿಜೇತ ಮಹಿಳಾ ಪವರ್‌ಲಿಫ್ಟರ್ ಯಶ್ತಿಕಾ ಆಚಾರ್ಯ (17) ಜಿಮ್‌ನಲ್ಲಿ ಸಾವಿಗೀಡಾಗಿದ್ದಾರೆ.
Advertisement
ಅವಘಡದ ತಕ್ಷಣ ಕ್ರೀಡಾಪಟುವನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು. ಘಟನೆ ವೇಳೆ ತರಬೇತುದಾರರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
Advertisement
ಈ ಸಂಬಂಧ ಕುಟುಂಬವು ಯಾವುದೇ ಪ್ರಕರಣ ದಾಖಲಿಸಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಬುಧವಾರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು. ಪವರ್-ಲಿಫ್ಟಿಂಗ್ ಒಂದು ಶಕ್ತಿ ಕ್ರೀಡೆಯಾಗಿದೆ. ಇದು ಸ್ಕ್ವಾಟ್, ಬೆಂಚ್ ಪ್ರೆಸ್ ಮತ್ತು ಡೆಡ್‌ಲಿಫ್ಟ್ ಎಂಬ ಮೂರು ಲಿಫ್ಟ್‌ಗಳಲ್ಲಿ ಗರಿಷ್ಠ ತೂಕವನ್ನು ಮೂರು ಪ್ರಯತ್ನಗಳಲ್ಲಿ ಒಳಗೊಂಡಿರುತ್ತದೆ. ಈ ಕ್ರೀಡೆಯು ಒಲಿಂಪಿಕ್ಸ್‌ನ ಭಾಗವಲ್ಲ.