ದಿಸ್ಪುರ: ಪ್ರೇಯಸಿ ಮದುವೆಯಾಗಲು ನಿರಾಕಸಿದ್ದಕ್ಕೆ ಮನನೊಂದು ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಲೈವ್ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಸ್ಸಾಂನ (Assam) ಗುವಾಹಟಿಯಲ್ಲಿ ನಡೆದಿದೆ.
ಜಯದೀಪ್ ರಾಯ್ (27) ಆತ್ಮಹತ್ಯೆ ಮಾಡಿಕೊಂಡ ಯುವಕ. ತನ್ನ ಕುಟುಂಬದವರ ಒತ್ತಡದಿಂದಾಗಿ ನನ್ನ ಗೆಳತಿ ನನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂದು ಹೇಳಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನನ್ನ ಮಗನ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ಯುವಕನ ಕುಟುಂಬದವರು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: 3ನೇ ಮದುವೆಯಾದ್ರೂ 2ನೇ ಗಂಡನೊಂದಿಗೆ ಸಂಬಂಧ- ರೊಚ್ಚಿಗೆದ್ದು ಪತ್ನಿಯನ್ನೇ ಕೊಲೆಗೈದ ಮೂರನೇ ಪತಿ
Advertisement
Advertisement
ಜಯದೀಪ್ ರಾಯ್ ಸಿಲ್ಚಾರ್‌ನಲ್ಲಿರುವ ತನ್ನ ಬಾಡಿಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಫೇಸ್‌ಬುಕ್ ಲೈವ್‌ನಲ್ಲಿ, “ನಾನು ಮದುವೆಯ ಪ್ರಸ್ತಾಪವನ್ನು ಕಳುಹಿಸಿದ್ದೆ. ಆದರೆ ಅವಳು ನಿರಾಕರಿಸಿದಳು. ಗೆಳತಿಯ ಚಿಕ್ಕಪ್ಪ ಕೊಲೆ ಬೆದರಿಕೆ ಹಾಕಿದ್ದ. ಅವಳು ನನ್ನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ನಾನು ಇಹಲೋಕ ತ್ಯಜಿಸುತ್ತೇನೆ” ಎಂದು ಯುವಕ ಹೇಳಿಕೊಂಡಿದ್ದಾನೆ.
Advertisement
“ನನ್ನ ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಸಹೋದರಿ, ಅಣ್ಣ ಮತ್ತು ಸೋದರ ಮಾವನಿಗೆ ಕ್ಷಮಿಸಿ ಎಂದು ಕೇಳಿಕೊಳ್ಳುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಆದರೆ ನಾನು ನನ್ನ ಗೆಳತಿಯನ್ನು ಹೆಚ್ಚು ಪ್ರೀತಿಸುತ್ತೇನೆ. ಅವಳಿಲ್ಲದೆ ನಾನು ಬದುಕಲು ಸಾಧ್ಯವಿಲ್ಲ” ಎಂದು ವೀಡಿಯೋದಲ್ಲಿ ಮಾತನಾಡಿದ್ದಾನೆ. ಇದನ್ನೂ ಓದಿ: ಜೈ ಶ್ರೀ ರಾಮ್ ಎನ್ನಲು ನಿರಾಕರಿಸಿದ 10 ವರ್ಷದ ಬಾಲಕನಿಗೆ ಥಳಿತ
Advertisement
ಕುಟುಂಬದವರಿಂದ ನಮಗೆ ಇನ್ನೂ ಯಾವುದೇ ಔಪಚಾರಿಕ ದೂರು ಬಂದಿಲ್ಲ. ಆದರೆ ನಾವು ತನಿಖೆಯನ್ನು ಪ್ರಾರಂಭಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ನುಮಲ್ ಮಹಂತ ತಿಳಿಸಿದ್ದಾರೆ.