ಕೊಪ್ಪಳ: ರಾಮಾಯಣ (Ramayana) ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಅಂಜನಾದ್ರಿ ಬೆಟ್ಟದ (Anjanadri Hills) ಆಂಜನೇಯ ಸ್ವಾಮಿ ದೇವಸ್ಥಾನ ಹುಂಡಿ ಹಣವನ್ನು ಗಂಗಾವತಿ ತಾಲೂಕು ಆಡಳಿತದ ವತಿಯಿಂದ ಎಣಿಕೆ ಮಾಡಲಾಯಿತು.
ತಹಶೀಲ್ದಾರ್ ವಿಶ್ವನಾಥ್ ಮುರಡಿ ಅವರ ನೇತೃತ್ವದಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡಲಾಗಿದ್ದು, ಸಿಸಿ ಕ್ಯಾಮೇರಾ, ಪೊಲೀಸ್ ಬಂದೋಬಸ್ತ್ ನಲ್ಲಿ ಹಣ ಎಣಿಕೆ ಮಾಡಲಾಯಿತು. ಒಟ್ಟು 22 ದಿನಗಳ ಅವಧಿಗೆ ಅಂದರೆ 2023ರ ಡಿಸೆಂಬರ್ 14 ರಿಂದ 2024ರ ಜನವರಿ 5 ರವರೆಗೆ ಹುಂಡಿಯಲ್ಲಿ ಒಟ್ಟು 27,27,761 ರೂಪಾಯಿಗಳು ಸಂಗ್ರಹವಾಗಿವೆ.
- Advertisement -
- Advertisement -
ನೇಪಾಳ ದೇಶದ ಎರಡು ವಿದೇಶಿ ನೋಟುಗಳು, 3 ವಿದೇಶಿ ನಾಣ್ಯಗಳು ದೊರೆತಿವೆ. ಗ್ರೇಡ್ 2 ತಹಶೀಲ್ದಾರ್ ಮಹಾಂತ್ ಗೌಡ ಪಾಟೀಲ್, ಶಿರಸ್ತೇದಾರ ಮೈಬೂಬ ಅಲಿ, ಕೃಷ್ಣವೇಣಿ, ನರ್ಮದಾ ಬಾಯಿ, ಕಂದಾಯ ನಿರೀಕ್ಷರಾದ ಮಂಜುನಾಥ್ ಹಿರೇವ್ಮಠ, ಮಹೇಶ್ ದಲಾಲ್ ಹಾಗೂ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಇದ್ದರು. ಇದನ್ನೂ ಓದಿ: ಅಂಬೇಡ್ಕರ್ ತತ್ವಗಳನ್ನ ಒಪ್ಪುವ ಯಾರೊಬ್ಬರೂ ನನ್ನ ಹೇಳಿಕೆ ತಪ್ಪು ಅನ್ನಲ್ಲ: ಯತೀಂದ್ರ ಸಮರ್ಥನೆ