ಪಟ್ನಾ: ದೆಹಲಿ ಹಾಗೂ ಮುಜಫರ್ ನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ಸೊಂದು ಉರುಳಿಬಿದ್ದು 27 ಮಂದಿ ಸಜೀವವಾಗಿ ಸುಟ್ಟು ಸಾವನ್ನಪ್ಪಿರುವ ಘಟನೆ ಬಿಹಾರ ಮೊತಿಹಾರಿಯ ಬಲ್ವಾ ಬಳಿ ನಡೆದಿದೆ.
ಇಂದು ಮಧ್ಯಾಹ್ನ ಹೆದ್ದಾರಿಯಲ್ಲಿ ಸಾಗುತ್ತಿದ್ದ ಬಸ್ ಉರುಳಿಬಿದ್ದಿದ್ದು, ಬಸ್ ಚಾಲಕ ಬೈಕ್ ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದ ವೇಳೆ ದುರ್ಘಟನೆ ನಡೆದಿದೆ. ಬಳಿಕ ಸ್ಥಳೀಯ ನಿವಾಸಿಗಳು ಬಸ್‍ನಲ್ಲಿದ್ದ ಜನರನ್ನುರಕ್ಷಿಸಲು ಯತ್ನಿಸಿದರೂ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
#SpotVisuals: Bihar: 12 people dead due to fire in a bus after it overturned, in Motihari; Death toll expected to rise, more details awaited. pic.twitter.com/SNyMYUYmih
— ANI (@ANI) May 3, 2018
Advertisement
ಘಟನೆ ಕುರಿತು ಮಾಹಿತಿ ಪಡೆದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿ, ಹಲವರನ್ನು ರಕ್ಷಣೆ ಮಾಡಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
#SpotVisuals: Total 27 people have died due to fire in a bus, after it overturned, in Bihar's Motihari. pic.twitter.com/NtKsNa4e0v
— ANI (@ANI) May 3, 2018
Advertisement
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು ಬಸ್ ನಲ್ಲಿ 32 ಜನರು ಪ್ರಯಾಣ ನಡೆಸುತ್ತಿದ್ದರು. ಮುಜಫರ್ ನಗರದಿಂದ ಬಸ್ ಹೊರಟಿತ್ತು. ಘಟನೆ ವೇಳೆ ಮಳೆ ಹೆಚ್ಚಾಗಿದ ಪರಿಣಾಮ ರಕ್ಷಣಾ ಕಾರ್ಯಾಚರಣೆ ಅಡ್ಡಿ ಉಂಟಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಬಿಹಾರ ವಿಪತ್ತು ನಿರ್ವಹಣೆ ಮತ್ತು ಪರಿಹಾರ ಸಚಿವರು ಪ್ರತಿಕ್ರಿಯಿಸಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮೃತ ವ್ಯಕ್ತಿಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
It is a really sad incident. There is a provision to give compensation of Rs 4 lakh to the next of kin of dead in such cases and it will be given: Bihar Disaster Management and Relief Minister on Motihari bus accident #Bihar pic.twitter.com/rS20bHej61
— ANI (@ANI) May 3, 2018