ವಾಷಿಂಗ್ಟನ್: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ವಿಶ್ವದ ಮಾಜಿ ನಂಬರ್ ಒನ್ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಗೇಟ್ಸ್ ತಮ್ಮ ದಾಂಪತ್ಯ ಜೀವನವನ್ನು ಕೊನೆಗೊಳಿಸುವುದಾಗಿ ಪ್ರಕಟಿಸಿದ್ದಾರೆ.
27 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ಇಬ್ಬರು ಸಮ್ಮತಿಯೊಂದಿಗೆ ಬೇರೆ ಬೇರೆಯಾಗಿ ಜೀವಿಸುವುದಾಗಿ ಪ್ರಕಟಿಸಿದ್ದಾರೆ. ಇಬ್ಬರು ಜಂಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದೇ ಬರಹ ಇರುವ ಪೋಸ್ಟ್ ಪ್ರಕಟಿಸುವ ಮೂಲಕ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದಾರೆ.
Advertisement
— Bill Gates (@BillGates) May 3, 2021
Advertisement
ಪೋಸ್ಟ್ ನಲ್ಲಿ ಏನಿದೆ?
ನಾವು ನಮ್ಮ ಸಂಬಂಧದ ಬಗ್ಗೆ ದೀರ್ಘವಾಗಿ ಚಿಂತನೆ ನಡೆಸಿದ ಬಳಿಕ ದಾಂಪತ್ಯ ಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಕಳೆದ 27 ವರ್ಷಗಳಲ್ಲಿ ನಾವು ಮೂವರು ಮಕ್ಕಳನ್ನು ಬೆಳೆಸಿದ್ದೇವೆ ಮತ್ತು ವಿಶ್ವದ ಜನರು ಆರೋಗ್ಯಕರ ಜೀವನ ನಡೆಸಲು ನಾವು ದತ್ತಿ ಸಂಸ್ಥೆಯೊಂದನ್ನು ಸ್ಥಾಪಿಸಿದ್ದೇವೆ. ಈ ಸಂಸ್ಥೆಯ ಕೆಲಸದಲ್ಲಿ ನಾವು ಪೂರ್ಣವಾಗಿ ತೊಡಗಿಸಿಕೊಂಡು ಜೊತೆಯಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ಆದರೆ ನಮ್ಮ ಜೀವನದ ಈ ಮುಂದಿನ ಹಂತದಲ್ಲಿ ದಂಪತಿಯಾಗಿ ನಾವು ಒಟ್ಟಿಗೆ ಮುಂದುವರಿಯಲು ಸಾಧ್ಯವಾಗುವುದಿಲ್ಲ. ನಾವು ಈ ಹೊಸ ಜೀವನವನ್ನು ಆರಂಭಿಸುತ್ತಿರುವ ಕಾರಣ ನಾವು ನಮ್ಮ ಕುಟುಂಬದ ಜೊತೆ ಪ್ರೈವೆಸಿಯನ್ನು ಕೇಳುತ್ತೇವೆ ಎಂದು ಜಂಟಿಯಾಗಿ ಹೇಳಿದ್ದಾರೆ.
Advertisement
Advertisement
67 ವರ್ಷದ ಬಿಲ್ ಗೇಟ್ಸ್ ಮತ್ತು 56 ವರ್ಷದ ಮೆಲಿಂಡಾ ಗೇಟ್ಸ್ ಮುಂದೇನು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಇಬ್ಬರು ಸೇರಿ ‘ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್’ ಹೆಸರಿನಲ್ಲಿ 2000ನೇ ಇಸ್ವಿಯಲ್ಲಿ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು.
1987ರಲ್ಲಿ ಮೆಲಿಂಡಾ ಪ್ರಾಡಕ್ಟ್ ಮ್ಯಾನೇಜರ್ ಆಗಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಸೇರಿದ್ದರು. ಇವರಿಬ್ಬರು ಕಂಪನಿಯ ಕೆಲಸದಲ್ಲಿ ಜೊತೆಯಾಗಿ ತೊಡಗಿದ್ದ ಸಮಯದಲ್ಲಿ ಪ್ರೇಮ ಮೊಳೆದು 1994ರಲ್ಲಿ ವಿವಾಹವಾಗಿದ್ದರು.
ದತ್ತಿ ನಿಧಿ ಕೆಲಸದಲ್ಲಿ ತೊಡಗಿಸಿಕೊಳ್ಳಲು 2008ರಲ್ಲಿ ಬಿಲ್ ಗೇಟ್ಸ್ ಮೈಕ್ರೋಸಾಫ್ಟ್ ಕಾರ್ಯನಿರ್ವಾಹಕ ಹುದ್ದೆಯಿಂದ ಕೆಳಗಿಳಿದಿದ್ದರು. ಬಳಿಕ ಕಂಪನಿಯ ಮಂಡಳಿಯಿಂದಲೂ ಹೊರ ಬಂದು ನಂತರ ತಂತ್ರಜ್ಞಾನ ಸಲಹೆಗಾರನಾಗಿ ಮುಂದುವರಿಯುತ್ತಿರುವುದಾಗಿ ತಿಳಿಸಿದ್ದರು.
ಅಮೆಜಾನ್ ಸಂಸ್ಥಾಪಕ ಸಿಇಓ, ವಿಶ್ವದ ನಂ.1 ಶ್ರೀಮಂತ ಜೆಫ್ ಬಿಜೋಸ್ ಅವರು 2 ವರ್ಷಗಳ ಹಿಂದೆ ಪತ್ನಿ ಮ್ಯಾಕ್‍ಕೆಂಜೀ ಅವರಿಗೆ ಡೈವೋರ್ಸ್ ನೀಡಿದ್ದರು. 26 ವರ್ಷಗಳ ದಾಂಪತ್ಯ ಜೀವನ ಗುಡ್‍ಬೈ ಹೇಳಿದ್ದ ಬಿಜೋಸ್ ಮ್ಯಾಕ್‍ಕೆಂಜೀ ಅವರಿಗೆ 38 ಶತಕೋಟಿ ಡಾಲರ್ ನೀಡುವ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಪರಿಹಾರವನ್ನು ನೀಡಿದ್ದರು. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ಜೀವನಾಂಶ ಪಡೆದ ಅಮೆಜಾನ್ ಸಂಸ್ಥಾಪಕನ ಪತ್ನಿ