– 250 ಮಂದಿ ಅಂತರಾಜ್ಯ ಪ್ರಯಾಣಿಕರು
– ಕಲಬುರಗಿಯಲ್ಲಿ 105, ಉಡುಪಿಯಲ್ಲಿ 62 ಪಾಸಿಟಿವ್
ಬೆಂಗಳೂರು: ಕರ್ನಾಟಕದಲ್ಲಿ ಇಂದು 267 ಮಂದಿಗೆ ಸೋಂಕು ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 4,063ಕ್ಕೆ ಏರಿಕೆಯಾಗಿದೆ.
267 ಮಂದಿಯಲ್ಲಿ 250 ಮಂದಿ ಅಂತರಾಜ್ಯ ಪ್ರಯಾಣಿಕರಾಗಿದ್ದು ಅದರಲ್ಲೂ 233 ಮಂದಿಗೆ ಮಹಾರಾಷ್ಟ್ರ ಸಂಪರ್ಕವಿದೆ. ಇಂದಿನದ್ದು ಸೇರಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಮರಳಿದ ಒಟ್ಟು 2,442 ಮಂದಿಗೆ ಕೋವಿಡ್ ಬಂದಿದೆ.
ಇಂದು ಕಲಬುರಗಿಯಲ್ಲಿ 105 ಮಂದಿಗೆ ಸೋಂಕು ಬಂದಿದೆ. ಒಟ್ಟು 510 ಮಂದಿಗೆ ಪಾಸಿಟಿವ್ ಬರುವ ಮೂಲಕ ಜಿಲ್ಲಾವಾರು ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ನಿನ್ನೆ ಮೊದಲ ಸ್ಥಾನದಲ್ಲಿದ್ದ ಉಡುಪಿಯಲ್ಲಿ 62 ಮಂದಿಗೆ ಪಾಸಿಟಿವ್ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 472ಕ್ಕೆ ಏರಿಕೆಯಾಗಿವು ಮೂಲಕ ಎರಡನೇ ಸ್ಥಾನಕ್ಕೆ ಇಳಿದಿದೆ.
ದಾವಣಗೆರೆಯಲ್ಲಿ 80 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ರೋಗಿ 2415ರ ಸಂಪರ್ಕಕ್ಕೆ ಬಂದಿದ್ದ ವೃದ್ಧೆ ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. 29ರಂದು ಮೃತಪಟ್ಟ ಬಳಿಕ ಅಂಬುಲೆನ್ಸ್ ನಲ್ಲಿ ದಾವಣಗೆರೆಯ ಕೋವಿಡ್ ಆಸ್ಪತ್ರೆಗೆ ಕರೆತರಲಾಗಿತ್ತು. ಪರೀಕ್ಷೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಇಂದು ಕಲಬುರಗಿ 105, ಉಡುಪಿ 62, ಬೆಂಗಳೂರು ನಗರ 20, ಮಂಡ್ಯ 13, ಯಾದಗಿರಿ 9, ರಾಯಚೂರು 35, ಹಾಸನ 1, ದಾವಣಗೆರೆ 3, ವಿಜಯಪುರ 6, ದಕ್ಷಿಣ ಕನ್ನಡ 2, ಮೈಸೂರು 2, ಬಾಗಲಕೋಟೆ 2, ಶಿವಮೊಗ್ಗ 2, ಬಳ್ಳಾರಿ 1, ಧಾರವಾಡ 1, ಕೋಲಾರ 2, ಬೆಂಗಳೂರು ಗ್ರಾಮಾಂತರದಲ್ಲಿ ಒಬ್ಬರಿಗೆ ಸೋಂಕು ಬಂದಿದೆ.
ಚಾಮರಾಜನಗರ, ಬೆಳಗಾವಿ, ಬೀದರ್, ಚಿಕ್ಕಬಳ್ಳಾಪುರ, ಉತ್ತರ ಕನ್ನಡ, ಚಿತ್ರದುರ್ಗ, ಗದಗ, ತುಮಕೂರು, ಚಿಕ್ಕಮಗಳೂರು, ಹಾವೇರಿ, ಕೊಪ್ಪಳ, ಕೊಡಗು, ರಾಮನಗರ ಇಂದು ಯಾವುದೇ ಪಾಸಿಟಿವ್ ವರದಿ ಕಂಡು ಬಂದಿಲ್ಲ.
ಇಂದು ಒಟ್ಟು 111 ಮಂದಿ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ ಒಟ್ಟು 1,514 ಮಂದಿ ಬಿಡುಗಡೆಯಾಗಿದ್ದಾರೆ. ವೃದ್ಧೆ ಸೇರಿದಂತೆ ಒಟ್ಟು ಇಲ್ಲಿಯವರೆಗೆ 53 ಮಂದಿ ಮೃತಪಟ್ಟಿದ್ದಾರೆ. ಒಟ್ಟು 2494 ಸಕ್ರಿಯ ಪ್ರಕರಣಗಳಿದ್ದು, 16 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಲ್ಲಿ ಎಷ್ಟು ಮಂದಿ ಬಿಡುಗಡೆ?
ಹಾಸನದಲ್ಲಿ 28, ಬೆಂಗಳೂರು ನಗರ 19, ದಾವಣೆಗರೆ 13, ಚಿಕ್ಕಬಳ್ಳಾಪುರ 13, ದಕ್ಷಿಣ ಕನ್ನಡ 9, ಬೆಳಗಾವಿ 7, ಬಳ್ಳಾರಿ 5, ಬಾಗಲಕೋಟೆ 5, ಶಿವಮೊಗ್ಗ 4, ವಿಜಯಪುರ 3, ಗದಗ 3, ಉತ್ತರ ಕನ್ನಡ ಮತ್ತು ಧಾರವಾಡದಲ್ಲಿ ಒಬ್ಬರು ಡಿಸ್ಚಾರ್ಜ್ ಆಗಿದ್ದಾರೆ.