ವಾಷಿಂಗ್ಟನ್: 2008ರ ಮುಂಬೈ ದಾಳಿ (Mumbai Attack) ಪ್ರಕರಣದ ಪ್ರಮುಖ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ (India) ಹಸ್ತಾಂತರಿಸುವ ಆದೇಶದ ವಿರುದ್ಧ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಕೆಯಾಗಿದೆ.
ಇತ್ತೀಚೆಗೆ ಅಮೆರಿಕ (America) ನ್ಯಾಯಾಲಯ ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು. ಅದರೆ ಈಗ ನ್ಯಾಯಾಲಯದ ನಿರ್ಧಾರದ ವಿರುದ್ಧ ರಾಣ ರಿಟ್ ಮೊರೆ ಹೋಗಿರುವುದು ಭಾರತಕ್ಕೆ ಹಸ್ತಾಂತರ ನಿರ್ಧಾರಕ್ಕೆ ಸವಾಲಾಗಿ ಪರಿಣಮಿಸಿದೆ. ರಾಣಾ ಪರ ವಕೀಲ, ಹಸ್ತಾಂತರವು ಅಮೆರಿಕ-ಭಾರತದ ಹಸ್ತಾಂತರ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿದ್ದಾರೆ. ಅಲ್ಲದೆ ಭಾರತ ಆರೋಪಿಸಿರುವ ಆರೋಪಗಳನ್ನು ಸಾಭೀತು ಪಡಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: 10 ಜನ ದಲಿತರ ಹತ್ಯೆಗೈದಿದ್ದ ಅಪರಾಧಿಗೆ 42 ವರ್ಷಗಳ ಬಳಿಕ ಶಿಕ್ಷೆ ಕೊಟ್ಟ ಕೋರ್ಟ್
Advertisement
ಒಪ್ಪಂದದ ಆರ್ಟಿಕಲ್ 6(1) ರ ಅಡಿಯಲ್ಲಿ ಹಸ್ತಾಂತರವನ್ನು ನಿರ್ಬಂಧಿಸಲಾಗಿದೆ. (ಇ) ಅಪರಾಧದಿಂದ ಖುಲಾಸೆಗೊಳಿಸಿದಾಗ ಹಸ್ತಾಂತರಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಘೋಷಿಸುತ್ತದೆ ಎಂದು ರಾಣಾ ಪರ ವಕೀಲ ವಾದಿಸಿದ್ದಾರೆ.
Advertisement
Advertisement
ಕಳೆದ ತಿಂಗಳು ಕ್ಯಾಲಿಫೋರ್ನಿಯಾದ ಜಿಲ್ಲಾ ಕೇಂದ್ರ ಕೋರ್ಟ್ 26/11 ದಾಳಿಯ ಆರೋಪಿ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದನೆ ನೀಡಿತ್ತು. ಈಗ ಸಲ್ಲಿಕೆಯಾದ ಹೇಬಿಯಸ್ ಕಾರ್ಪಸ್ ರಿಟ್ ಪ್ರಾಥಮಿಕವಾಗಿ ವಿಚಾರಣೆಯ ಅರ್ಜಿಯಾಗಿ ಕಾರ್ಯನಿರ್ವಹಿಸುತ್ತದೆ. ಬಂಧನಕ್ಕೆ ಕಾರಣಗಳು ಅಥವಾ ಆಧಾರಗಳನ್ನು ಕೂಲಂಕಷವಾಗಿ ಪರೀಕ್ಷಿಸಲು ಸೂಚಿಸುತ್ತದೆ.
Advertisement
2020ರ ಜೂನ್ 10 ರಂದು ಹಸ್ತಾಂತರದ ದೃಷ್ಟಿಯಿಂದ ರಾಣಾನನ್ನು ತಾತ್ಕಾಲಿಕವಾಗಿ ಬಂಧಿಸುವಂತೆ ಭಾರತವು ದೂರು ಸಲ್ಲಿಸಿತ್ತು. ಬೈಡನ್ ಸರ್ಕಾರ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸುವುದಕ್ಕೆ ಒಪ್ಪಿಕೊಂಡಿತ್ತು. ಈ ಬಗ್ಗೆ ಸಭೆ ನಡೆಸಿ ದಾಳಿಯ ಯೋಜನೆಗಳ ಬಗ್ಗೆ ರಾಣಾಗೆ ತಿಳಿದಿತ್ತು. ರಾಣಾ ಅವರು ಪಿತೂರಿಯ ಭಾಗವಾಗಿದ್ದ ಎಂದು ಅಮೆರಿಕಾ ಸರ್ಕಾರ ಪ್ರತಿಪಾದಿಸಿತ್ತು.
ರಾಣಾನನ್ನು ಪ್ರಸ್ತುತ ಲಾಸ್ ಏಂಜಲೀಸ್‍ನ ಮೆಟ್ರೋಪಾಲಿಟನ್ ಡಿಟೆನ್ಶನ್ ಸೆಂಟರ್‌ನಲ್ಲಿ ಬಂಧಿಸಲಾಗಿದೆ. ಅಲ್ಲದೆ ಆತನನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ನಡೆಸಲಾಗುತ್ತಿದೆ ಎಂದು ಎನ್‍ಐಎ ಮೂಲಗಳು ತಿಳಿಸಿವೆ.
2008ರ ಮುಂಬೈ ತಾಜ್ ಹೋಟೆಲ್ (Taj Mahal Palace hotel) ಮೇಲೆ 10 ಪಾಕಿಸ್ತಾನಿ (Pakistan) ಭಯೋತ್ಪಾದಕರು 60 ಗಂಟೆಗಳ ದಾಳಿ ನಡೆಸಿದ್ದರು. ದಾಳಿಯಲ್ಲಿ 6 ಅಮೆರಿಕನ್ನರು ಸೇರಿದಂತೆ ಒಟ್ಟು 166 ಜನರು ಸಾವನ್ನಪ್ಪಿದರು. ಇದನ್ನೂ ಓದಿ: 4 ವರ್ಷದ ಮಗು ಜೊತೆ ಪೊಲೀಸರ ವಿರುದ್ಧ ಏಕಾಂಗಿಯಾಗಿ ಹೋರಾಡಿ ಎಫ್‍ಐಆರ್ ಮಾಡಿಸಿದ ಮಹಿಳೆ!