ಬೆಂಗಳೂರು: ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೂ ಮೊದಲೇ ಯಡಿಯೂರಪ್ಪ ಮೂರು ಪಾಲು ಮಾಡಿ ನಿಗಮ ಮಂಡಳಿಗಳಿಗೆ ನೇಮಕ ಮಾಡಿ ಪೊಲಿಟಿಕಲ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ.
ಯಡಿಯೂರಪ್ಪ ನಂಬಿದವರ ಪಾಲು, ಪುತ್ರ ವಿಜಯೇಂದ್ರ ಆಪ್ತರ ಪಾಲು, ಪಕ್ಷದ ಪಾಲು ಎಂದು ವಿಂಗಡಿಸಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. 26 ನಿಗಮ ಮಂಡಳಿ ಸ್ಥಾನಗಳಲ್ಲಿ ಮೂವರು ಶಾಸಕರು, ನಾಲ್ವರು ವಿಜಯೇಂದ್ರ ಆಪ್ತರು, ನಾಲ್ವರು ಯಡಿಯೂರಪ್ಪ ಆಪ್ತರನ್ನು ನೇಮಕ ಮಾಡಲಾಗಿದೆ.
Advertisement
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಶಾಸಕ ಎಸ್ ಆರ್ ವಿಶ್ವನಾಥ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧ್ಯಕ್ಷ ಸ್ಥಾನ ನೀಡಲಾಗಿದೆ.
Advertisement
Advertisement
ಯಾರಿಗೆ ಯಾವ ನಿಗಮ?
ಎಸ್‌ಆರ್ ವಿಶ್ವನಾಥ್ – ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ವಿಜುಗೌಡ ಪಾಟೀಲ್ – ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ
ಲಿಂಗಾರೆಡ್ಡಿ – ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ
ಎಸ್.ಇ.ಚಿಕ್ಕನಗೌಡ – ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ
ರುದ್ರೇಶ್ – ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ
Advertisement
ತಮ್ಮೇಶ್ ಗೌಡ – ಕರ್ನಾಟಕ ವಿದ್ಯುತ್ ಕಾರ್ಖಾನೆ
ಕಿರಣ್ ಕುಮಾರ್ – ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
ನಟಿ ತಾರಾ – ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ
ಬಿ.ಸಿ.ನಾಗೇಶ್ – ಕಾರ್ಮಿಕ ಕಲ್ಯಾಣ ಮಂಡಳಿ
ಬಿ.ಕೆ. ಮಂಜುನಾಥ್ – ನಾರು ಅಭಿವೃದ್ಧಿ ಮಂಡಳಿ
ಎಸ್.ಆರ್.ಗೌಡ – ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ
ಕೆ.ವಿ. ನಾಗರಾಜ್‍ಗೆ – ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ – ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
ಚಂದು ಪಾಟೀಲ್ – ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷ ಪಟ್ಟ
ತಿಪ್ಪೇಸ್ವಾಮಿಗೆ – ತುಂಗಭದ್ರಾ ಕಾಲುವೆ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ)
ಕಿರಣ್ ಕುಮಾರ್ – ಜೈವಿಕ ತಂತ್ರಜ್ಞಾನ ನಿಗಮದ ಅಧ್ಯಕ್ಷ ಸ್ಥಾನ
ದುರ್ಯೋಧನ ಐಹೊಳೆ – ಅಂಬೇಡ್ಕರ್ ಅಭಿವೃದ್ಧಿ ನಿಗಮದ
ಹೆಚ್ ಹನುಮಂತಪ್ಪ -ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಎಂ ರಾಮಚಂದ್ರ – ಕೇಂದ್ರ ಪರಿಹಾರ ಸಮಿತಿ
ಮುನಿಕೃಷ್ಣ – ಆದಿ ಜಾಂಬವ ಅಭಿವೃದ್ಧಿ ನಿಗಮ
ರಘು ಆರ್ – ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
ಬಾಬು ಪತ್ತಾರ್ – ವಿಶ್ವಕರ್ಮ ಸಮುದಾಯದ ಅಭಿವೃದ್ಧಿ ನಿಗಮ
ಜಿಕೆ ಗಿರೀಶ್ ಉಪ್ಪಾರ್ – ಉಪ್ಪಾರ ಅಭಿವೃದ್ಧಿ ನಿಗಮ
ಎಸ್ ನರೇಶ್ ಕುಮಾರ್ – ಸವಿತಾ ಸಮಾಜ ಅಭಿವೃದ್ಧಿ ನಿಗಮ
ಎಲ್.ಆರ್.ಮಹದೇವಸ್ವಾಮಿ – ಮೈಸೂರು ಮೃಗಾಲಯ ಪ್ರಾಧಿಕಾರ
ನಿತಿನ್ ಕುಮಾರ್ – ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ