ನವದೆಹಲಿ: ದೇಶದಲ್ಲಿ ಕೊರೊನಾ 3ನೇ ಅಲೆ ಏರಿಳಿತ ಮುಂದುವರಿದಿದೆ. ನಿನ್ನೆ ಒಟ್ಟು 2,55,874 ಕೇಸ್ ಪತ್ತೆಯಾಗಿದೆ. ಈ ಮೂಲಕ ಭಾನುವಾರಗಿಂತ 50,190 ಕೇಸ್ ಇಳಿಕೆ ಕಂಡಿದೆ. ಅಲ್ಲದೆ ಪಾಸಿಟಿವಿಟಿ ರೇಟ್ 15.52% ಗೆ ಇಳಿಮುಖಗೊಂಡಿದೆ.
Advertisement
ಒಟ್ಟು 439 ಮರಣ ಪ್ರಕರಣ ದಾಖಲಾಗಿದ್ದು, ಸದ್ಯ 22,36,842 ಸಕ್ರಿಯ ಪ್ರಕರಣವಿದೆ. ದೇಶದಲ್ಲಿ ಒಟ್ಟು 5.62% ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದು, ಅದೇ ರೀತಿ 93.15% ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ರಾಷ್ಟ್ರ ರಾಜಧಾನಿ ಡೆಲ್ಲಿಯಲ್ಲಿ 5,760 ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ. ಈ ಮೂಲಕ ಡೆಲ್ಲಿಯಲ್ಲಿ ಪಾಸಿಟಿವ್ ಕೇಸ್‍ಗಳ ಸಂಖ್ಯೆ ಇಳಿಕೆ ಕಂಡಿದೆ. ಇದನ್ನೂ ಓದಿ: ಬಿಜೆಪಿ ಶಾಸಕನ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳ ದುರ್ಮರಣ!
Advertisement
#Unite2FightCorona#LargestVaccineDrive#OmicronVariant
???????????????????? ????????????????????https://t.co/AVi1QSy8rc pic.twitter.com/scj06Lmuw6
— Ministry of Health (@MoHFW_INDIA) January 25, 2022
Advertisement
ಭಾರತದಲ್ಲಿ ಈವರೆಗೆ ಒಟ್ಟು 3,70,71,898 ಮಂದಿ ಗುಣಮುಖರಾಗಿದ್ದಾರೆ. ವಾರದ ಪಾಸಿಟಿವಿಟಿ ರೇಟ್ 17.17% ಇದ್ದು, ಒಟ್ಟು 71.88 ಕೋಟಿ ಕೊರೊನಾ ಟೆಸ್ಟ್ ನಡೆಸಲಾಗಿದೆ. ಕಳೆದ 24 ಗಂಟೆಗಳಲ್ಲಿ 16,49,108 ಮಂದಿಗೆ ಕೊರೊನಾ ಟೆಸ್ಟ್ ನಡೆಸಲಾಗಿದೆ. ದೇಶಾದ್ಯಂತ 162.92 ಕೋಟಿ ಡೋಸ್ ಲಸಿಕೆ ವಿತರಣೆ ನಡೆದಿದೆ. ಇದನ್ನೂ ಓದಿ: ಹೋಂ ಐಸೋಲೇಷನ್‍ನಿಂದ ಕೆಲಸಕ್ಕೆ ಮರಳುವವರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯವಲ್ಲ: ತ್ರಿಲೋಕ್ ಚಂದ್ರ
Advertisement
#Unite2FightCorona#LargestVaccineDrive
➡️ India’s Cumulative #COVID19 Vaccination Coverage exceeds 162.97 Cr (1,62,92,09,308).
➡️ More than 62 Lakh doses administered in the last 24 hours.
➡️ More than 88 lakh Precaution Doses administered so far. https://t.co/FvOppuI1KF pic.twitter.com/eGlp8RZQ9V
— Ministry of Health (@MoHFW_INDIA) January 25, 2022
ಕರ್ನಾಟಕದಲ್ಲಿ ಕಳೆದ 24 ಗಂಟೆಗಳಲ್ಲಿ 46,426 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಅವಧಿಯಲ್ಲಿ ಸೋಂಕಿನಿಂದಾಗಿ 32 ಮೃತಪಟ್ಟಿದ್ದಾರೆ. 41,703 ಮಂದಿ ಸೇರಿದಂತೆ ಈವರೆಗೆ 31,62,977 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ ಒಟ್ಟು 3,62,487 ಇದೆ. ಸೋಂಕಿನಿಂದಾಗಿ ಇದುವರೆಗೆ 38,614 ಮಂದಿ ಮರಣ ಹೊಂದಿದ್ದಾರೆ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 21,569 ಕೋವಿಡ್ ಪ್ರಕರಣ ವರದಿಯಾಗಿತ್ತು. ಇದನ್ನೂ ಓದಿ: ಪಂಜಾಬ್‍ನಲ್ಲಿ AAP ಅಧಿಕಾರಕ್ಕೆ ಬಂದ್ರೆ ಜನರ ಸಲಹೆ ಮೇರೆಗೆ ಬಜೆಟ್: ಅರವಿಂದ್ ಕೇಜ್ರಿವಾಲ್