ಹೈದರಾಬಾದ್: ಭಾರತದ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ವಿಶೇಷ ದಾಖಲೆಯೊಂದನ್ನು ಬರೆದಿದ್ದಾರೆ.
🚨 Milestone Alert 🚨
2⃣5⃣0⃣0⃣ runs and counting in T20I Cricket for Captain Suryakumar Yadav! 👏👏
Live – https://t.co/ldfcwtHGSC#TeamIndia | #INDvBAN | @IDFCFIRSTBank pic.twitter.com/iJZ9VhjvxS
— BCCI (@BCCI) October 12, 2024
Advertisement
ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ (ಅಕ್ಟೋಬರ್ 12) ಬಾಂಗ್ಲಾದೇಶ (Bangladesh) ವಿರುದ್ಧ ನಡೆದ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಬ್ಬರಿಸಿದ ಅಬ್ಬರಿಸಿದ ಸೂರ್ಯ ಕೇವಲ 35 ಎಸೆತಗಳಲ್ಲಿ 75 ರನ್ ಚಚ್ಚಿದರು. ಇದೇ ವೇಳೆ ಭಾರತದ ಪರ ಅತಿ ವೇಗವಾಗಿ 2,500 ರನ್ ಪೂರೈಸಿದ 2ನೇ ಬ್ಯಾಟರ್ ಎಂಬ ದಾಖಲೆಗೆ ಪಾತ್ರರಾದರು.
Advertisement
Advertisement
ಟೀಂ ಇಂಡಿಯಾ ಪರ ಆಡಿದ 71ನೇ ಇನಿಂಗ್ಸ್ ಹಾಗೂ 73ನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್, 2,500 ರನ್‌ಗಳ ಗಡಿ ದಾಟಿಸಿದರು. ಅಂದಹಾಗೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೇವಲ 68 ಇನಿಂಗ್ಸ್ 73 ಪಂದ್ಯಗಳಲ್ಲಿ ಈ ದಾಖಲೆ ನಿರ್ಮಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದರು. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಜಂ ಹೆಸರಿನಲ್ಲೂ ಈ ದಾಖಲೆ ಇದೆ. ಬಾಬರ್ ಕೇವಲ 62 ಇನಿಂಗ್ಸ್, 67 ಪಂದ್ಯಗಳಲ್ಲಿ ಈ ಮೈಲುಗಲ್ಲು ಮುಟ್ಟಿದ್ದಾರೆ.
Advertisement
ಅತಿ ವೇಗವಾಗಿ 2,500 ರನ್ ಪೂರೈಸಿದ ಬ್ಯಾಟರ್
* ಬಾಬರ್ ಆಜಂ (ಪಾಕಿಸ್ತಾನ) – 67 ಪಂದ್ಯ
* ಸೂರ್ಯಕುಮಾರ್ ಯಾದವ್ (ಭಾರತ) – 73 ಪಂದ್ಯ
* ವಿರಾಟ್ ಕೊಹ್ಲಿ (ಭಾರತ) – 73 ಪಂದ್ಯ
* ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ) – 76 ಪಂದ್ಯ
* ಆರನ್ ಫಿಂಚ್ (ಆಸ್ಟ್ರೇಲಿಯಾ) – 78 ಪಂದ್ಯ
* ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) – 86 ಪಂದ್ಯ