– ಅಕ್ರಮ ಹಣ ಸಾಗಾಣಿಕೆ, ಸಂಗ್ರಹದ ಮೇಲೆ ತೀವ್ರ ನಿಗಾ
ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಕ್ಕೆ 250 ಮಂದಿ ಮನಿ ಕಮಾಂಡೋ ಪಡೆ ಬಂದಿಳಿದಿದ್ದಾರೆ. ಚುನಾವಣೆಗೆ ಮತ ಪಡೆಯಲು ಅಕ್ರಮ ಹಣ ಸಾಗಾಣಿಕೆ ಹಾಗೂ ಹಣ ಸಂಗ್ರಹದ ಮೇಲೆ ತೀವ್ರ ನಿಗಾ ವಹಿಸಲು ಮನಿ ಕಮಾಂಡೋ ಪಡೆ ರಾಜ್ಯಕ್ಕೆ ಕಾಲಿಟ್ಟಿದೆ.
ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ರಾಜ್ಯದ 224 ವಿಧಾನಸಭೆ ಕ್ಷೇತ್ರಗಳಲ್ಲಿ ಮನಿ ಕಮಾಂಡೋ ಪಡೆ ಹದ್ದಿನ ಕಣ್ಣು ಇಡಲು ಸಿದ್ಧರಾಗಿದ್ದಾರೆ. 224 ಕ್ಷೇತ್ರಗಳಲ್ಲಿ 250 ಐಟಿ ಅಧಿಕಾರಿಗಳ ತಂಡ ಬಂದಿಳಿದಿದ್ದಾರೆ. ಇವರು ಅಕ್ರಮ ಹಣ ಸಾಗಾಣಿಕೆ, ಅಕ್ರಮ ಹಣ ಸಂಗ್ರಹದ ಮೇಲೆ ತೀವ್ರ ನಿಗಾ ವಹಿಸಲು ಪ್ಲಾನ್ ಮಾಡಿದ್ದಾರೆ.
ಈಗಾಗಲೇ 28 ಲೋಕಸಭಾ ವ್ಯಾಪ್ತಿಯ 224 ಕ್ಷೇತ್ರಗಳಲ್ಲಿ ಒಬ್ಬೊಬ್ಬ ಅಧಿಕಾರಿ ನೇಮಕವಾಗಿದ್ದಾರೆ. ಅದರಲ್ಲೂ ಸ್ಟಾರ್ ಕ್ಷೇತ್ರಗಳಲ್ಲಿ ಅಧಿಕಾರಿಗಳು ತೀವ್ರ ನಿಗಾ ವಹಿಸಲಿದ್ದಾರೆ. ಮಂಡ್ಯ, ಹಾಸನ, ಕಲಬುರಗಿ, ಬೆಂಗಳೂರು ಉತ್ತರ ಸೇರಿದಂತೆ ಸ್ಟಾರ್ ಕ್ಷೇತ್ರಗಳಿಗೆ ಮನಿ ಕಮಾಂಡೋ ಪಡೆ ಎಚ್ಚರಿಕೆಯಿಂದ ಕಾರ್ಯವಹಿಸಲಿದ್ದಾರೆ.
ಮಂಡ್ಯ ಒಂದು ಜಿಲ್ಲೆಗೇನೆ ಸುಮಾರು 16 ಮಂದಿ ಮನಿ ಕಮಾಂಡೋಗಳನ್ನ ನೇಮಕ ಮಾಡಲಾಗಿದೆ. ಹಾಗೆಯೇ ಬೆಂಗಳೂರು ನಗರದಲ್ಲೇ 35ಕ್ಕೂ ಹೆಚ್ಚಿನ ಮನಿ ಕಮಾಂಡೋ ಟೀಂ ಬೀಡುಬಿಟ್ಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv