ಡೆಡ್ಲಿ ಡ್ರ್ಯಾಗನ್ ಅಟ್ಟಹಾಸಕ್ಕೆ ವಿಶ್ವವೇ ತಲ್ಲಣ – ಕೊರೊನಾ ಸಾವಿನ ಸಂಖ್ಯೆ 8 ಸಾವಿರದತ್ತ

Public TV
2 Min Read
coronavirus

-ಇರಾನ್‍ನಲ್ಲಿದ್ದ 254 ಮಂದಿ ಭಾರತೀಯರಿಗೆ ಡೆಡ್ಲಿ ಸೋಂಕು

ಬೆಂಗಳೂರು: ಕೊರೊನಾ ಅಟ್ಟಹಾಸವನ್ನು ಕಂಟ್ರೋಲ್ ಮಾಡುವ ಯಾವುದೇ ಮಾರ್ಗ ಇಡೀ ಜಗತ್ತಿಗೇ ಕಾಣದಂತಾಗಿದೆ. ಹಾಗಾಗಿಯೇ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಇದೆ. ನಿನ್ನೆ ಮೊನ್ನೆವರೆಗೂ 5 ಸಾವಿರದ ಗಡಿ ದಾಟಿದ್ದ ಸೋಂಕಿತರ ಸಾವಿನ ಸಂಖ್ಯೆ. ಈಗ 8 ಸಾವಿರದತ್ತ ಮುನ್ನುಗ್ಗುತ್ತಿದೆ. ಇಡೀ ವಿಶ್ವದಲ್ಲಿ ಯಾವ ದೇಶದಲ್ಲೂ ಕೊರೊನಾ ಕಂಟ್ರೋಲ್‍ಗೆ ಬಂದಿಲ್ಲ. ಹಾಗಾಗಿ ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 7,894 ದಾಟಿದೆ. 1,94,584 ಸೋಂಕಿತರಿದ್ದು, ಇದುವರೆಗೂ 81,080 ಮಂದಿ ಗುಣಮುಖರಾಗಿದ್ದಾರೆ.

Corona Virus 9

ಇರಾನ್‍ಗೆ ತೆರಳಿದ್ದ ಕಾರ್ಗಿಲ್‍ನ 254 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಒಟ್ಟು 800 ಮಂದಿಯ ಭಾರತೀಯ ನಿಯೋಗ ಇರಾನ್‍ಗೆ ತೆರಳಿತ್ತು. ಎಲ್ಲರೂ ಕೊರೊನಾ ಪೀಡಿತ ಇರಾನ್‍ನ ಖಾಮ್ ಎಂಬಲ್ಲಿದ್ದು, ಭಾರತೀಯರ ಚಿಕಿತ್ಸೆಗೆ ಇರಾನ್ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ. ಇರಾನ್‍ನಲ್ಲಿ ಒಟ್ಟು 988 ಮಂದಿ ಸಾವನ್ನಪ್ಪಿದ್ದು, 16 ಸಾವಿರ ಮಂದಿ ಸೋಂಕಿತರಾಗಿದ್ದಾರೆ.

coronavirus test 37

ಇಟಲಿಯಲ್ಲಿ ಸೋಮವಾರ ಒಂದೇ ದಿನ 349 ಮಂದಿ ಸಾವನ್ನಪ್ಪಿದ್ದಾರೆ. ಮೃತರ ಸಂಖ್ಯೆ 2503 ದಾಟಿದೆ. ಮುಂದಿನ 15 ದಿನಗಳ ಕಾಲ ಮನೆಯಿಂದ ಯಾರು ಹೊರಗೆ ಬರಬಾರದು ಎಂದು ಫ್ರಾನ್ಸ್ ಸರ್ಕಾರ ಆದೇಶ ನೀಡಿದೆ. ಯುರೋಪ್‍ನ ಬಹುತೇಕ ದೇಶಗಳು ನಿರ್ಬಂಧದಲ್ಲಿವೆ. ಸ್ಪೇನ್‍ನಲ್ಲಿ ಸೋಂಕಿತರ ಸಂಖ್ಯೆ ಕ್ಷಣಕ್ಷಣಕ್ಕೂ ಏರಿಕೆ ಆಗ್ತಿದೆ. 11 ಸಾವಿರ ಮಂದಿಗೆ ಸೋಂಕು ತಗುಲಿದೆ. 533 ಮಂದಿ ಬಲಿ ಆಗಿದ್ದಾರೆ. ಅಮೆರಿಕದಲ್ಲಿ 112 ಮಂದಿ ಬಲಿ ಆಗಿದ್ದು, ಸೋಂಕಿತರ ಸಂಖ್ಯೆ 6 ಸಾವಿರ ದಾಟಿದೆ. ಕೊರೊನಾ ದೇಶವನ್ನು ಆರ್ಥಿಕ ದುಸ್ಥಿತಿಗೆ ತಳ್ಳಬಹುದು ಎಂಬ ಆತಂಕವನ್ನು ಟ್ರಂಪ್ ಹೊರಹಾಕಿದ್ದಾರೆ.

Corona Lab

ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 247 ದಾಟಿದೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 114ನ್ನು ದಾಟಿದೆ. ರಷ್ಯಾ, ಚಿಲಿ, ಉಕ್ರೇನ್, ಪೆರೂ ದೇಶಗಳು ವಿದೇಶಿಯರಿಗೆ ಪ್ರವೇಶ ನಿರಾಕರಿಸುತ್ತಿದ್ದಾರೆ. ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಸೋಂಕಿತರು ಕಂಡುಬರುತ್ತಿದ್ದಾರೆ. ಚೀನಾದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಆದರೆ ವಿದೇಶಿಯರಿಂದ ಸೋಂಕು ಹಬ್ಬಬಹುದು ಎಂಬ ಭಯದಲ್ಲಿ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಭದ್ರತಾ ಮಂಡಳಿಗೆ ಸಂಬಂಧಿಸಿದ ಎಲ್ಲಾ ಸಭೆಗಳನ್ನು ರದ್ದು ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *