ಚೆನ್ನೈ: ಕೊರೊನಾ ವೈರಸ್ ಸಂಕಷ್ಟದಲ್ಲಿರುವ ಜನರಿಗೆ ಹಲವಾರು ಸಂಸ್ಥೆಗಳು, ಎನ್‍ಜಿಒಗಳು ಮತ್ತು ಅನೇಕ ವ್ಯಕ್ತಿಗಳು ಸಹಾಯ ಮಾಡಲು ಮುಂದೆ ಬರತ್ತಿದ್ದಾರೆ. ಸದ್ಯ ಚೆನ್ನೈನಲ್ಲಿಯೂ ಸಹ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚೆನ್ನೈನ ನಾಗರಿಕ ಸಂಸ್ಥೆ 250 ಟ್ಯಾಕ್ಸಿಗಳನ್ನು ಅಂಬುಲೆನ್ಸ್‌ಗಳಾಗಿ ಪರಿವರ್ತಿಸಿದ್ದು, ರೋಗಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಿದೆ.
ಗ್ರೇಟರ್ ಚೆನ್ನೈ ಕಾಪೋರೇಷನ್ 250 ಕೋವಿಡ್-ವಿಶೇಷ ಟ್ಯಾಕ್ಸಿಗಳನ್ನು ಮಿನಿ ಅಂಬುಲೆನ್ಸ್‌ಗಳಾಗಿ ಪರಿವರ್ತಿಸಿದ್ದು, ಇಪ್ಪತ್ತು ವಾಹನಗಳಿಗೆ ಮುನ್ಸಿಪಲ್ ಅಡ್ಮಿನಿಸ್ಟ್ರೇಶನ್ ಸಚಿವ ಕೆ.ಎನ್. ನೆಹರುರವರು ಚಾಲನೆ ನೀಡಿದರು.
Advertisement
Advertisement
ಈ ಕುರಿತಂತೆ ಗ್ರೇಟರ್ ಚೆನ್ನೈ ಕಾರ್ಪೋರೇಶನ್ ಆಯುಕ್ತ ಗಗನ್ ಸಿಂಗ್ ಬೇಡಿ, 108 ಅಂಬುಲೆನ್ಸ್ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಮತ್ತು ಆಕ್ಸಿಜನ್ ಅಗತ್ಯವಿಲ್ಲದವರು ಕೂಡ 108 ಅಂಬುಲೆನ್ಸ್ ಸೇವೆಗಳನ್ನು ಬಳಸುತ್ತಿದ್ದಾರೆ. ಇದು ಆಕ್ಸಿಜನ್ ಅಗತ್ಯವಿರುವವರ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ಟ್ಯಾಕ್ಸಿ ಹಾಗೂ ಕಾರುಗಳನ್ನು ತಾತ್ಕಾಲಿಕ ಅಂಬುಲೆನ್ಸ್‌ಗಳಾಗಿ ಪರಿವರ್ತಿಸಲು ನಿರ್ಧರಿಸಲಾಯಿತು. ನಾಗರಿಕ ಸಂಘವು ಪ್ರತಿ ವಲಯದಲ್ಲಿ 15 ವಾಹನಗಳನ್ನು ನಿಗದಿಪಡಿಸಿದೆ ಮತ್ತು 250 ವಾಹನಗಳನ್ನು ಕಾರನ್ನು ಅಂಬುಲೆನ್ಸ್‌ಗಳಾಗಿ ಪರಿವರ್ತಿಸಲು ಆದೇಶಿಸಿದೆ ಎಂದರು.