ನ್ಯೂಯಾರ್ಕ್: ಇಂದಿನ ತಂತ್ರಜ್ಞಾನದ ಯುಗದಲ್ಲಿ ಜನರು ನೇರವಾಗಿ ಮಾತನಾಡುವುದಕ್ಕಿಂತ ಎಸ್‍ಎಂಎಸ್ ಗಳಲ್ಲಿ ಮಾತನಾಡುತ್ತಿದ್ದಾರೆ. ಈ ಎಸ್‍ಎಂಎಸ್ ಈಗ 25 ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.
1992, ಡಿಸೆಂಬರ್ 3 ರಂದು ವೊಡಾಫೋನ್ ನ ಸಾಫ್ಟ್ ವೇರ್ ಎಂಜಿನಿಯರ್ ನೀಲ್ ಪಾಪ್‍ವರ್ಥ್ ಅವರು ಕಂಪನಿ ಡೈರೆಕ್ಟರ್ ಆದ ರಿಚರ್ಡ್ ಜಾರ್ವಿಸ್ ಗೆ ಮೇರಿ ಕ್ರಿಸ್‍ಮಸ್ ಎಂಬ ಸಣ್ಣ ಸಂದೇಶವನ್ನು ರವಾನಿಸಿದ್ದರು. 25 ವರ್ಷಗಳ ಹಿಂದೆ ಪಾಪ್‍ವರ್ಥ್ ಮೊದಲ ಬಾರಿಗೆ ಮೊಬೈಲ್‍ನಲ್ಲಿ ಸಂದೇಶವನ್ನು ಕಳುಹಿಸಿದ್ದರು. ಆದರೆ 1 ವರ್ಷಗಳ ಕಾಲ ಇದನ್ನು ಯಾರೂ ಬಳಸಲಿಲ್ಲ.
Advertisement
Advertisement
ಇದಾದ ಒಂದು ವರ್ಷದಲ್ಲೇ ಅಂದರೆ 1993ನಲ್ಲಿ ನೋಕಿಯಾ ಸಂಸ್ಥೆ ಸಂದೇಶ ಸ್ವೀಕರಿಸುವಾಗ ಬೀಪ್ ಸೌಂಡ್ ಬರುವ ಹಾಗೆ ಮಾಡಿತ್ತು. ಆ ಸಂದೇಶದಲ್ಲಿ 160 ಪದಗಳನ್ನು ಮಾತ್ರ ಟೈಪ್ ಮಾಡಿ ಕಳುಹಿಸಲಾಗುತ್ತಿತ್ತು.
Advertisement
ವಿಶ್ವದಲ್ಲಿ ಮೊದಲ ಎಸ್‍ಎಂಎಸ್ ಕಳುಹಿಸಿದ ನಿಮಗೆ ಇದರ ಮೇಲೆ ಇಷ್ಟು ಪರಿಣಾಮ ಬೀಳಲಿದೆ ಎಂಬುದು ತಿಳಿದಿದ್ದ ಎಂದು ಕೇಳಿದ ಪ್ರಶ್ನೆಗೆ ನೀಲ್ “ಎಸ್‍ಎಂಎಸ್ ಇಷ್ಟು ಪ್ರಸಿದ್ಧಿ ಆಗುತ್ತೆ ಎಂದು ನಾನು ಎಂದಿಗೂ ಕಲ್ಪನೆ ಮಾಡಿರಲಿಲ್ಲ. ಎಸ್‍ಎಂಎಸ್ ನಿಂದ ಎಮೋಜಿ ಹಾಗೂ ಮೆಸೇಜಿಂಗ್ ನಂತಹ ಸಾಕಷ್ಟು ಆಪ್ ಬಂದು ಕೋಟ್ಯಾಂತರ ಜನ ಬಳಸುತ್ತಿರುವುದು ಸಂತೋಷವಾಗಿದೆ” ಎಂದು ನೀಲ್ ತಿಳಿಸಿದ್ದಾರೆ.