ರಾಯಚೂರು: ಜಿಲ್ಲೆಯ ಯುವತಿಯೊಬ್ಬಳು ತನ್ನ ಪಾಲಿನ ಆಸ್ತಿ ಸಂಪತ್ತನ್ನೆಲ್ಲಾ ಬಿಟ್ಟು ಅತ್ಯಂತ ಕಠಿಣ ಆಚರಣೆಯ ಜೈನ್ (Jain) ಭಗವತಿ ದೀಕ್ಷೆ ಪಡೆದಿದ್ದಾಳೆ. ತಂದೆ ವ್ಯಾಪಾರಿಯಾಗಿದ್ದರೂ ಮಗಳು ಮಾತ್ರ ಅಲೌಕಿಕ ಜಗತ್ತಿನ ಕಡೆ ಒಲವು ತೋರಿದ್ದಾಳೆ.
Advertisement
ಈಕೆ ರಾಯಚೂರು (Raichur) ನಗರದ ವ್ಯಾಪಾರಿ ಜ್ಞಾನಚಂದ್ ಭಂಡಾರಿ ಪುತ್ರಿ 25 ವರ್ಷದ ಸ್ನೇಹ ಭಂಡಾರಿ. ಈಗ ಅಲೌಕಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಿ.ಕಾಂ (B.Com) ಪದವೀಧರೆ ಆಗಿರುವ ಸ್ನೇಹಾ ಭಂಡಾರಿ, ಅದ್ಧೂರಿ ಮೆರವಣಿಗೆ ಮೂಲಕ ನಗರದ ಎಸ್‍ಆರ್‍ಪಿಎಸ್ ಪಿಯು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜೈನ್ ಭಗವತಿ ದೀಕ್ಷೆ ಪಡೆದ್ರು. ಸ್ನೇಹ ಭಂಡಾರಿ ದೀಕ್ಷೆ ಪಡೆದ ಬಳಿಕ ಸಾದ್ವಿ ಚೇಷ್ಟಾಶ್ರೀ ಆಗಿದ್ದಾರೆ. ಇದನ್ನೂ ಓದಿ: ಇಂದಿನಿಂದ ಭಾರತ್ ಜೋಡೋ ಪುನಾರಂಭ- ರಾಹುಲ್ ಜೊತೆ ಹೆಜ್ಜೆ ಹಾಕಲಿರೋ ಸೋನಿಯಾ
Advertisement
Advertisement
ಜೈನ ದೀಕ್ಷೆಯನ್ನ ಪಡೆಯಬೇಕು ಅಂದ್ರೆ ಆಧ್ಯಾತ್ಮದ ಆಳವನ್ನು ಅರಿತಿರಲೇಬೇಕು. ದೀಕ್ಷೆ ಪಡೆದವರು ಸದಾ ಬರಿಗಾಲಿನಲ್ಲೇ ನಡೆಯಬೇಕು. ತಲೆಗೆ ಬೂದಿ ಹಚ್ಚಿ ಕೂದಲನ್ನು ಕೀಳುತ್ತಾರೆ. ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡಿ ಊಟ ಮಾಡುತ್ತಾರೆ, ಸ್ವತಃ ಅಡುಗೆ ಮಾಡುವಂತಿಲ್ಲ. ಅಡುಗೆ ಮಾಡಲು ಯಾರನ್ನೂ ನೇಮಿಸಿಕೊಳ್ಳುವುದೂ ಇಲ್ಲ. ಎಷ್ಟೇ ದೂರದ ಪ್ರಯಾಣವಿದ್ದರೂ ವಾಹನ ಬಳಸುವ ಆಗಿಲ್ಲ. ವಿದ್ಯುತ್ ಲೈಟ್, ಮೊಬೈಲ್, ಫ್ಯಾನ್, ಎಸಿ, ಟಿವಿ ಯಾವುದನ್ನೂ ಬಳಸುವಂತಿಲ್ಲ. ಸೂರ್ಯಾಸ್ತದ ನಂತರ ಕತ್ತಲಲ್ಲೆ ಕಾಲ ಕಳೆಯಬೇಕು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕಠಿಣ ನಿಯಮಗಳು ಮೈಝುಮ್ಮೆನಿಸುವಂತಿವೆ. ಹೀಗಾಗಿ ಜೈನ್ ಸಮುದಾಯದಲ್ಲಿ ದೀಕ್ಷೆ ಪಡೆಯುವುದು ಸುಲಭದ ಮಾತಲ್ಲ.
Advertisement
2013ರಲ್ಲಿ ರಾಯಚೂರು ನಗರದ ಯುವತಿಯೊಬ್ಬಳು ಸನ್ಯಾಸತ್ವ ಪಡೆದಿದ್ದಳು, ಈಗ ಒಂಭತ್ತು ವರ್ಷಗಳ ಬಳಿಕ ರಾಯಚೂರು ಜಿಲ್ಲೆಯಿಂದ ಮತ್ತೊಬ್ಬ ಯುವತಿ ಸನ್ಯಾಸತ್ವ ಪಡೆದಿದ್ದಾಳೆ.