ರಾಯಚೂರು: ನಗರಸಭೆ ಕೊನೆಗೂ ಎಚ್ಚೆತ್ತಿದ್ದು ನಗರದ ಕೆಲವು ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಕೊಡುವ ವ್ಯವಸ್ಥೆ ಮಾಡಿದೆ.
ಕಲುಷಿತ ನೀರಿನಿಂದ ಈಗಾಗಲೇ ಆರು ಜನ ಸಾವನ್ನಪ್ಪಿದ್ದಾರೆ. ಈಗ ನಗರದಲ್ಲಿರುವ 16 ಜಿಎಸ್‍ಎಲ್‍ಆರ್ ಟ್ಯಾಂಕ್ ಹಾಗೂ 36 ಓವರ್ ಹೆಡ್ ಟ್ಯಾಂಕ್‍ಗಳಲ್ಲಿ 25 ಟ್ಯಾಂಕ್‍ಗಳ ಸ್ವಚ್ಚತಾ ಕಾರ್ಯ ನಡೆಸಿದ್ದಾರೆ. ಬೆಳಗಾವಿ, ಮಂಗಳೂರು ಸೇರಿ ವಿವಿಧೆಡೆಯಿಂದ ಕರೆಯಿಸಲಾಗಿರುವ ತಜ್ಞ ತಂಡದಿಂದ ಟ್ಯಾಂಕ್‍ಗಳ ಸ್ವಚ್ಚತಾ ಕಾರ್ಯ ನಡೆಸಲಾಗಿದೆ. ಇದನ್ನೂ ಓದಿ: ರಾಯಚೂರಿಗೆ ಕೊನೆಗೂ ಭೇಟಿ ನೀಡಿದ ಉಸ್ತುವಾರಿ ಸಚಿವ: ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಣೆ
ರಾಂಪೂರ ಜಲಶುದ್ಧೀಕರಣ ಘಟಕ, ಶುದ್ಧವಾದ ಟ್ಯಾಂಕ್ ಹಾಗೂ ಮನೆಗಳಿಗೆ ಸರಬರಾಜು ಮಾಡಲಾಗುತ್ತಿರುವ ಮಾದರಿಗಳನ್ನ ನಿತ್ಯ ಪರಿಶೀಲನೆ ಮಾಡಿ ಜನರಿಗೆ ಶುದ್ಧ ನೀರು ಕೊಡುವ ಪ್ರಯತ್ನಕ್ಕೆ ನಗರಸಭೆ ಮುಂದಾಗಿದೆ. ಅಪಾಯದ ಮುನ್ಸೂಚನೆ ಸಿಕ್ಕಾಗಲೇ ನಗರಸಭೆ ಎಚ್ಚೆತ್ತಿದ್ದರೆ ಇಷ್ಟೊಂದು ಅವಾಂತರಗಳು ಸಂಭವಿಸುತ್ತಿರಲಿಲ್ಲ.
ವಾಂತಿ-ಭೇದಿಯಿಂದ ದಾಖಲಾದವರಲ್ಲಿ ನೂರಾರು ಜನ ಇನ್ನೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಮಸ್ಯೆ ಈಗ ಬಗೆಹರಿದಿದ್ದು, ಮುಂದೆ ಶುದ್ಧ ನೀರು ಪ್ರತಿ ಮನೆಗೂ ಸರಬರಾಜು ಮಾಡುತ್ತೇವೆ ಎಂದು ನಗರಸಭೆ ಆಡಳಿತ ಹಾಗೂ ಅಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ಕವಿಶೈಲದಿಂದ ತೀರ್ಥಹಳ್ಳಿವರೆಗೆ ಕಾಂಗ್ರೆಸ್ ಪಾದಯಾತ್ರೆ