ಮೊದಲೆಲ್ಲಾ ಎಂಗೇಜ್‍ಮೆಂಟ್ ವೇಳೆ ಜೋಡಿಗಳು ಭಿನ್ನ, ಭಿನ್ನವಾದಂತಹ ರಿಂಗ್ ಧರಿಸುತ್ತಿದ್ದರು. ಆದರೆ ಇಂದಿನ ಪೀಳಿಗೆಯ ಜೋಡಿಗಳು ರಿಂಗ್‍ಗಳಲ್ಲಿ ಹೊಸತನ ಮತ್ತು ಬದಲಾವಣೆಯನ್ನು ಇಷ್ಟಪಡುತ್ತಾರೆ. ಅಂತಹ ಜೋಡಿಗಳಿಗೆ ಮಾರುಕಟ್ಟೆಯಲ್ಲಿ ಬಹಳಷ್ಟು ವೆರೈಟಿ ಹಾಗೂ ಸುಂದರವಾದ ರಿಂಗ್‍ಗಳಿದೆ. ನೀವು ಮದುವೆಯಾಗುತ್ತಿರುವವರಿಗೆ ನಿಮಗೆ ಇಷ್ಟವಾದಂತಹ ಡಿಸೈನ್ ರಿಂಗ್ ಅನ್ನು ಗಿಫ್ಟ್ ಆಗಿ ನೀಡಬಹುದು. ಅದರಲ್ಲಿಯೂ ಗೋಲ್ಡ್, ಸಿಲ್ವರ್, ಪ್ಲಾಟಿನಮ್ ಹೀಗೆ ಹಲವಾರು ಬಗೆಯ ಸುಂದರವಾದ ರಿಂಗ್‍ಗಳಿದ್ದು, ಡೈಮೆಂಡ್ ರಿಂಗ್‍ಗಳು ಕೈಗಳಿಗೆ ಹೆಚ್ಚು ಆಕರ್ಷಣಿಯವಾಗಿರುತ್ತದೆ. ಜೊತೆಗೆ ಡ್ಯುಯಲ್ ಕಲರಿಂಗ್ ರಿಂಗ್‍ಗಳು ಅದ್ಭುತವಾಗಿ ಕಾಣಿಸುತ್ತದೆ.
Advertisement
ರಿಂಗ್ ಮೇಲೆ ಹೆಸರುಗಳನ್ನು ಕೆತ್ತಿರುವ, ಪ್ರೀತಿಯ ಸಂಕೇತವಾಗಿರುವ ಆರ್ಟ್ ಶೇಪ್ ರಿಂಗ್‍ಗಳು ಹೀಗೆ ಕಣ್ಮನ ಸೆಳೆಯುವ ಹಲವಾರು ಡಿಸೈನ್ ಉಂಗುರಗಳಿದ್ದು, ಇವುಗಳನ್ನು ನೀವು ನಿಮ್ಮ ಸಂಗಾತಿಗೆ ನೀಡಬಹುದಾಗಿದೆ. ಕಪಲ್ಸ್ ಕುರಿತ ಕೆಲವೊಂದಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.
Advertisement
Advertisement
ಸಿಂಬಲ್ ಇನ್ಫಿನಿಟಿ ಲವ್ ಕಪಲ್ ರಿಂಗ್ಸ್: ಈ ರಿಂಗ್‍ನ ಒಳಗಡೆ ಐ ಲವ್ ಯೂ ಎಂಬ ಪದಗಳನ್ನು ಬರೆಯಲಾಗಿದ್ದು, ಮೇಲ್ಭಾಗದಲ್ಲಿ ಇನ್ಫಿನಿಟಿಯಂತೆ ವಿನ್ಯಾಸಗೊಳಿಸಿದ ಕರ್ವ್ ಕಪಲ್ ರಿಂಗ್ ನಿಮಗೆ ಸುಂದರವಾಗಿ ಕಾಣಿಸುತ್ತದೆ. ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಮ್‍ನಲ್ಲಿ ಈ ಉಂಗುರಗಳು ದೊರೆಯುತ್ತದೆ. ಈ ರಿಂಗ್ ಕೊನೆಯ ಉಸಿರಿರುವವರೆಗೂ ಒಟ್ಟಿಗೆ ಬಾಳೋಣ ಎಂಬ ಮಹತ್ತರವಾದ ಅರ್ಥವನ್ನು ನೀಡುತ್ತದೆ.
Advertisement
ಕಪಲ್ ಹಾರ್ಟ್ ರಿಂಗ್ಸ್: ರಿಂಗ್ ಮಧ್ಯ ಭಾಗದಲ್ಲಿ ಹಾರ್ಟ್ ಡಿಸೈನ್ ಇರುವ ಈ ರಿಂಗ್ ಕಪಲ್ಸ್‌ಗೆ ಬೆಸ್ಟ್ ರಿಂಗ್ ಎಂದೇ ಹೇಳಬಹುದು. ಭಿನ್ನ, ಭಿನ್ನವಾದ ಚಿನ್ನವನ್ನು ಬಳಸಿ ವಧು ಮತ್ತು ವರರಿಗೆ ಈ ರಿಂಗ್ ಸಿದ್ಧಪಡಿಸಬಹುದಾಗಿರುತ್ತದೆ.
ಕ್ರಾಸ್ ಮತ್ತು ಕ್ರೌನ್ ಕಪಲ್ ರಿಂಗ್: ಮ್ಯಾಚಿಂಗ್ ಕಪಲ್ಸ್ ರಿಂಗ್‍ಗಳಲ್ಲಿ ಕ್ರಾಸ್ ಮತ್ತು ಕ್ರೌನ್ ಕಪಲ್ ರಿಂಗ್‍ಗಳು ಕೂಡ ಹೊಸ ಟ್ರೆಂಡ್ ಸೃಷ್ಟಿಸಿದೆ. ಇದರಲ್ಲಿ ಹುಡುಗರಿಗೆ ಅಡ್ಡವಾದ ಮತ್ತು ಹುಡುಗಿಯರಿಗೆ ಕಿರೀಟದಂತೆ ಉಂಗುರವನ್ನು ವಿನ್ಯಾಸಗೊಳಿಸಲಾಗಿದ್ದು, ಒಂದು ರೀತಿ ರಾಜ ಮತ್ತು ರಾಣಿಯರು ಧರಿಸುವಂತೆ ಐಷಾರಾಮಿ ಲುಕ್ ಈ ಉಂಗುರ ನೀಡುತ್ತದೆ.
ನೇಮ್ ಕಪಲ್ ರಿಂಗ್ ಸೆಟ್: ಈ ಉಂಗುರಗಳ ಮೇಲ್ಭಾಗದಲ್ಲಿ ಹೆಸರುಗಳನ್ನು ಕೆತ್ತಲಾಗಿದ್ದು, ಇದನ್ನು ಸಿಲ್ವರ್‍ನಿಂದ ತಯಾರಿಸಲಾಗಿದೆ. ಅಲ್ಲದೇ ಅಕ್ಷರಗಳ ಪಕ್ಕದಲ್ಲಿ ಹಾರ್ಟ್‍ಶೇಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಉಂಗುರವನ್ನು ಸಾಕಷ್ಟು ಜನರು ಇಷ್ಟಪಡುತ್ತಾರೆ.